ಬೆಂಗಳೂರು: ಬ್ಲಾಕ್ ಮನಿಯನ್ನ ವೈಟ್ ಮಾಡೋದಾಗಿ ಕಂಡೋರ ದುಡ್ಡು ತಂದು 2 ಕೋಟಿ ರೂ. ಹಣ ದರೋಡೆಯಾಯ್ತು ಅಂತಾ ಕಥೆ ಕಟ್ಟಿದ್ದ ದೂರುದಾರ ಸೇರಿ 15 ಮಂದಿಯನ್ನ ವಿದ್ಯಾರಣ್ಯಪುರ ಪೊಲೀಸರು (Vidhyaranyapura Police) ಅರೆಸ್ಟ್ ಮಾಡಿದ್ದಾರೆ.
ಜೂನ್ 25ರಂದು ಎಂ.ಎಸ್ ಪಾಳ್ಯ ಬಳಿಯ ರಿಯಲ್ ಎಸ್ಟೇಟ್ ಕಚೇರಿಯಲ್ಲಿ 2 ಕೋಟಿ ರೂ. ಹಣ ದರೋಡೆಯಾದ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್
ಬ್ಲಾಕ್ ಮನಿಯನ್ನ (Black Money) ಅಮೆರಿಕ ಡಾಲರ್‌ಗೆ ಕನ್ವರ್ಟ್ ಮಾಡಿ ಜಿಎಸ್‌ಟಿ ಬಿಲ್ ಸಹಿತ ಅಕೌಂಟ್‌ಗೆ ಹಾಕೋದಾಗಿ ಚಿಕ್ಕಪೇಟೆಯ ಎಲೆಕ್ಟ್ರಿಕ್ ಉದ್ಯಮಿಯಿಂದ ಶ್ರೀಹರ್ಷ ಎಂಬಾತ ಹಣ ಪಡೆದು ತಂದಿದ್ದ. ಹಣ ಎಣಿಸುವಾಗ ದರೋಡೆಯಾಗೋಯ್ತು ಅಂತಾ ಶ್ರೀಹರ್ಷನೇ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ನೀಡಲು ಬಂದಿದ್ದ ಶ್ರೀಹರ್ಷನ ಮುಖದಲ್ಲಿ ಹಣ ಕಳೆದುಕೊಂಡ ದುಃಖ, ದುಗುಡವು ಕಂಡುಬಾರದಿದ್ದರಿಂದ ಪೊಲೀಸರು ಅನುಮಾನಗೊಂಡಿದ್ದರು. ಇದನ್ನೂ ಓದಿ: ಬಾಲಕಿಗೆ ಪಾಗಲ್ ಪ್ರೇಮಿ ಲವ್ ಟಾರ್ಚರ್ – ಜನರ ಎದುರೇ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ
ತನಿಖೆಗಿಳಿದ ಪೊಲೀಸರಿಗೆ ಇದೊಂದು ಹಣ ವಂಚನೆಯ ಗ್ರೂಪ್ ಅನ್ನೋದು ಗೊತ್ತಾಗಿದೆ. ಬಳಿಕ ಪೊಲೀಸರು ಹಂತ ಹಂತವಾಗಿ ಪ್ರಕರಣವನ್ನು ಭೇದಿಸಿ 15 ಆರೋಪಿಗಳನ್ನ ಬಂಧಿಸಿ 1.11 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಾಟ್ನಾ | ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್ ಹತ್ಯೆ – ಇಬ್ಬರು ಆರೋಪಿಗಳ ಮೇಲೆ ಫೈರಿಂಗ್
ಹಾಕಿಬ್ ಪಾಷಾ, ಮೌಸಿನ್ ಖಾನ್, ಸುಹೇಲ್, ವಸೀಮ್, ತರಕಾರಿ ವಸೀಮ್, ಸಲ್ಮಾನ್ ಖಾನ್, ಮುಹೀಬ್, ಸಲ್ಮಾನ್ ಅಮ್ಜದ್, ಅಫ್ರೀದಿ ಹಣವನ್ನು ಚೀಲದಲ್ಲಿ ಮತ್ತು ಕಾರ್ಡ್ ಬೋರ್ಡ್ ಬಾಕ್ಸ್ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದರು. ಬಳಿಕ ಹಣವನ್ನು ಒಟ್ಟು ಹನ್ನೆರಡು ಜನರು ಹಂಚಿಕೊಂಡಿದ್ದರು.
ಪೊಲೀಸರ ತನಿಖೆ ವೇಳೆ ದೂರುದಾರ ಶ್ರೀಹರ್ಷನು ಈ ಡಕಾಯಿತಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಕ್ಷಿತ್, ಚಂದ್ರಶೇಖರ, ರಾಕೇಶ್, ಬೆಂಜಮಿನ್ ಹರ್ಷ ಸೇರಿದಂತೆ 15 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 4 ಕಾರು, 1 ಲಾಂಗ್, 3 ಚಾಕು ಮತ್ತು 4 ದ್ವಿಚಕ್ರ ವಾಹನ, 2 ಆಟೋ, 8 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇನ್ನು ಕೆಲ ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರಿಂದ ಹುಡುಕಾಟ ಮುಂದುವರೆದಿದೆ.