1,700 ರೂ. ಸಿಲಿಂಡರ್ 3,600ಕ್ಕೆ ಮಾರಾಟ – ವಾಣಿಜ್ಯ ಗ್ಯಾಸ್ ಅಭಾವ; ಹೋಟೆಲ್ ಮಾಲೀಕರು ಹೈರಾಣು

2 Min Read

– ರಬ್ಬರ್ ಬೆಲೆ ಏರಿಕೆ.. ವಾಹನಗಳ ಟೈಯರ್ ರೇಟ್ ಹೆಚ್ಚಳ

ಬೆಂಗಳೂರು: ಕಮರ್ಷಿಯಲ್ ಗ್ಯಾಸ್ ಅಭಾವದಿಂದ ಹೋಟೆಲ್ ಮಾಲೀಕರು (Hotel owner) ಹೈರಾಣಾಗಿದ್ದಾರೆ. ಖಾಸಗಿ ಏಜೆನ್ಸಿಗಳು ದುಪ್ಪಟ್ಟು ದರಕ್ಕೆ ಸಿಲಿಂಡರ್ ಮಾರಾಟ ಮಾಡ್ತಾ ಇರೋದನ್ನ ಹೋಟೆಲ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ವಾರ ಗ್ಯಾಸ್ ಪೂರೈಕೆಯಲ್ಲಿ ಹೆಚ್ಚಳ ಆಗುತ್ತಾ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಗ್ಯಾಸ್ ಅಭಾವದಿಂದ ಹೋಟೆಲ್‌ಗಳಿಗೆ ಭಾರೀ ಹೊಡೆತ ಆಗಿದೆ ನಿರೀಕ್ಷಿಸಿದಷ್ಟು ಗ್ಯಾಸ್‌ಗಳನ್ನ ಪೂರೈಕೆ ಮಾಡ್ತಿಲ್ಲ ಸರ್ಕಾರ. ಕಮರ್ಷಿಯಲ್ ಗ್ಯಾಸ್‌ಗಾಗಿ ಹೋಟೆಲ್ ಮಾಲೀಕರು ಪರದಾಡುತ್ತಾ ಇದ್ದಾರೆ. ಸರ್ಕಾರದಿಂದ ಸರಿಯಾಗಿ ಗ್ಯಾಸ್ ಪೂರೈಕೆ ಆಗದ ಹಿನ್ನೆಲೆ ಖಾಸಗಿಯಲ್ಲಿ ಕೊಂಡುಕೊಳ್ಳುತ್ತಾ ಇದ್ದಾರೆ. ಖಾಸಗಿಯಲ್ಲಿ ದುಪ್ಪಟ್ಟು ದರಕ್ಕೆ ಸಿಲಿಂಡರ್ (Commercial Cylinder) ಮಾರಾಟ ಮಾಡ್ತಾ ಇದ್ದಾರೆ ಅನ್ನೋದು ಬಯಲಾಗಿದೆ. ಸ್ವತಃ ಹೋಟೆಲ್ ಮಾಲೀಕರೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡ್ತಾ ಇದ್ದಾರೆ ಅಂತಾ ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಇದನ್ನೂ ಓದಿ: ಪಾಕ್‌ ಧ್ವಜ ಇರುವ 10 ತೈಲ ಟ್ಯಾಂಕರ್‌ಗಳನ್ನು ಇರಾನ್‌ ನಮಗೆ ಗಿಫ್ಟ್‌ ನೀಡಿದೆ: ಟ್ರಂಪ್‌

ಖಾಸಗಿಯಲ್ಲಿ 17 ಕೆಜಿ ಸಿಲಿಂಡರ್‌ಗೆ ಯುದ್ದಕ್ಕೂ ಮುನ್ನ 1,700 ರೂ. ಇತ್ತು ಯುದ್ಧ ಶುರುವಾದ ಮೇಲೆ ಅದೇ 17 ಕೆಜಿ ಸಿಲಿಂಡರ್‌ಗೆ ಬರೋಬ್ಬರಿ 3,600 ರೂ. ಆಗಿದೆ. ಖಾಸಗಿ ಏಜೆನ್ಸಿಗಳ ದರಕ್ಕೆ ಹೋಟೆಲ್ ಮಾಲೀಕರು ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಸರ್ಕಾರದಿಂದ 33% ಸಿಲಿಂಡರ್ ಸಿಗ್ತಾ ಇದೆ ಅಂತಾರೆ ಆದರೆ ಸರಿಯಾಗಿ ಸಿಗ್ತಿಲ್ಲ ಮುಂದಿನ ವಾರ ಆದರೂ ಹೆಚ್ಚು ಕಮರ್ಷಿಯಲ್ ಗ್ಯಾಸ್ ಕೊಡ್ತಾರೆ ಅಂತಾ ಹೋಟೆಲ್ ಮಾಲೀಕರು ನಿರೀಕ್ಷೆಯನ್ನ ಇಡುತ್ತಿದ್ದಾರೆ.

ರಬ್ಬರ್ ಬೆಲೆ ಏರಿಕೆ.. ವಾಹನಗಳ ಟೈಯರ್ ರೇಟ್ ಹೆಚ್ಚಳ
ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಗ್ಯಾಸ್ ಸಮಸ್ಯೆ.. ಪೆಟ್ರೋಲ್ ಅಭಾವದ ವದಂತಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಈ ಮಧ್ಯೆ ಪೆಟ್ರೋಲಿಯಂ ಉಪಉತ್ಪನ್ನವಾದ ರಬ್ಬರ್ ಬೆಲೆ ಏರಿಕೆಯಿಂದಾಗಿ ಟಯರ್‌ಗಳ ಬೆಲೆಯಲ್ಲಿ ಶೇ.2 ರಷ್ಟು ಏರಿಕೆ ಕಂಡಿದೆ. ವಾಹನಗಳಿಗೆ ಅಗತ್ಯವಾಗಿ ಬೇಕಾಗಿರೋದೇ ಟೈಯರ್‌ಗಳು. ಮೊನ್ನೆಯಿಂದ ಎಲ್ಲಾ ವಾಹನಗಳ ಬ್ರಾಂಡ್ ಗಳ ಟೈಯರ್ ರೇಟ್ ಚೇಂಜ್ ಆಗಿದೆ. ಇದನ್ನೂ ಓದಿ: ಮೂಡಿಗೆರೆ ಲವ್ ಜಿಹಾದ್ ಆರೋಪ ಪ್ರಕರಣ – 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತೆ

ಟೈಯರ್‌ಗಳ ಬೆಲೆ ಏರಿಕೆ – ಯಾವುದಕ್ಕೆ ಎಷ್ಟು? 
* ಬಸ್:- 30 ಸಾವಿರದಿಂದ 31 ಸಾವಿರಕ್ಕೆ ಏರಿಕೆ
* ಲಾರಿ:- 25 ಸಾವಿರದಿಂದ 26 ಸಾವಿರಕ್ಕೆ ಏರಿಕೆ
* ಕಾರು:- 3,500 ದಿಂದ 3,700ಕ್ಕೆ ಏರಿಕೆ
* ದ್ವಿ ಚಕ್ರ:- 1,200ದಿಂದ 1,300ಕ್ಕೆ ಏರಿಕೆ

ಒಟ್ಟಾರೆ.. ಯುದ್ಧದ ಎಫೆಕ್ಟ್‌ನಿಂದ ರಾಜ್ಯದಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆ ಕಾಣ್ತಿದೆ. ಸಾರ್ವಜನಿಕರು ಮಾತ್ರ ಇಲ್ಲ ಎನ್ನದಂತೆ ದುಪ್ಪಟ್ಟು ದುಡ್ಡು ಕೊಡಲೇಬೇಕಾಗಿದೆ.

Share This Article