– ಹಣದ ಹೊಳೆ ಹರಿಸದೇ ಇದ್ದಿದ್ರೇ ಎನ್‌ಡಿಎ ನಾಶವಾಗ್ತಿತ್ತು
ಪಾಟ್ನಾ: ಬಿಹಾರ ಚುನಾವಣೆಗೆ (Bihar Elections) ಎನ್‌ಡಿಎ ಒಕ್ಕೂಟ 40,000 ಕೋಟಿ ರೂ. ಹಣ ಖರ್ಚು ಮಾಡಿದೆ. ಇದರಲ್ಲಿ ವಿಶ್ವಬ್ಯಾಂಕ್‌ನ 14,000 ಕೋಟಿ ರೂ. ಸಾಲದ ಹಣ ಬಳಕೆಯಾಗಿದೆ ಎಂದು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ (Prashant Kishor) ಅವರ ಜನ್ ಸುರಾಜ್ ಪಕ್ಷ ಹೊಸ ಬಾಂಬ್ ಸಿಡಿಸಿದೆ.
बिहार विधानसभा चुनाव 2025 के नतीजों पर जन सुराज के राष्ट्रीय अध्यक्ष उदय सिंह जी का बयान!! pic.twitter.com/RgJ0PDLk5Y
— Jan Suraaj (@jansuraajonline) November 15, 2025
ಚೊಚ್ಚಲ ಚುನಾವಣೆ ಎದುರಿಸಿದ ಜನ್ ಸುರಾಜ್ ಪಕ್ಷವು ಬಿಹಾರದಲ್ಲಿ (Bihar) ಖಾತೆ ತೆರೆಯುವಲ್ಲಿ ವಿಫಲವಾಯಿತು. ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎನ್‌ಡಿಎ ವಿಶ್ವಬ್ಯಾಂಕ್‌ನಿಂದ ಪಡೆದ 14 ಸಾವಿರ ಕೋಟಿ ಹಣವನ್ನ ಚುನಾವಣೆಗೆ ಬಳಸಿದೆ. ಉಡುಗೊರೆಗಳು ಹಾಗೂ ಉಚಿತ ಕೊಡುಗೆಗಳಿಗಾಗಿ ಹಣ ಬಳಸಿಕೊಂಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: Delhi Explosion | ಇ-ಮೇಲ್ ಡ್ರಾಫ್ಟ್ ಮೂಲಕ ಸಂವಹನ ನಡೆಸುತ್ತಿದ್ದ ಉಗ್ರರು; Dead Drop ಸೀಕ್ರೆಟ್ ಏನು?

ಚುನಾವಣೆ ಘೋಷಣೆಯಾಗುವವರೆಗೆ ಕಳೆದ ಜೂನ್‌ನಿಂದ ನಿತೀಶ್ ಸರ್ಕಾರ (Nitish Government) ಸಾರ್ವಜನಿಕರ ಹಣದ ಮೂಲಕ ಜನರ ಮತಗಳನ್ನ ಖರೀದಿ ಮಾಡಿದೆ. ಅದಕ್ಕಾಗಿ ಒಟ್ಟು 40,000 ಕೋಟಿ ಹಣ ಖರ್ಚು ಮಾಡಿದೆ. ಈ ಪೈಕಿ ವಿಶ್ವಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ (World Bank Loan) 14,000 ಕೋಟಿ ಹಣವನ್ನ ಉಚಿತ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ಆದ್ದರಿಂದಲೇ ಎನ್‌ಡಿಎಗೆ ಬಹುಮತ ಬಂದಿದೆ ಎಂದು ಬಾಂಬ್ ಸಿಡಿಸಿದರು. ಇದನ್ನೂ ಓದಿ: Delhi Blast | ಅಕ್ರಮವಾಗಿ 20 ಲಕ್ಷ ಗಳಿಸಿದ್ದ I20 ಕಾರು ಚಾಲಕ; ಭಾರೀ ಪ್ರಮಾಣದ ರಸಗೊಬ್ಬರ ಖರೀದಿ

ʻಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆʼ ಹೆಸರಿನಲ್ಲಿ ನಿತೀಶ್ ಚುನಾವಣೆ ಘೋಷಣೆ ಆಗುವ ಮೊದಲೇ ರಾಜ್ಯದ ಮಹಿಳೆಯರ ಖಾತೆಗಳಿಗೆ ತಲಾ 10,000 ರೂ.ಗಳನ್ನ ವರ್ಗಾಯಿಸಿದ್ರು. ಮಹಿಳೆಯರನ್ನ ಓಲೈಸಲು ಇದಿಷ್ಟೇ ಸಾಕಿತ್ತು. ಹೀಗೆ ಹಣದ ಹೊಳೆ ಹರಿಸದೇ ಇದ್ದಿದ್ದರೇ, ಎನ್‌ಡಿಎ ಒಕ್ಕೂಟ ಬಿಹಾರದಲ್ಲಿ ನಾಶವಾಗುತ್ತಿತ್ತು ಎಂದು ಹೇಳಿದರು.
ನಿತೀಶ್ ಸರ್ಕಾರ ಕೇವಲ 700 ರೂ. ವೃದ್ಧಾಪ್ಯ ಪಿಂಚಣಿ ನೀಡುತ್ತಿತ್ತು. ಜನ್ ಸುರಾಜ್ 2,000 ರೂ. ವೃದ್ಧಾಪ್ಯ ಪಿಂಚಣಿ ಭರವಸೆ ನೀಡಿದ ಬಳಿಕ 1,100 ರೂ.ಗಳಿಗೆ ಹೆಚ್ಚಿಸಿತು. ಇದರ ನಡುವೆ ಜಂಗಲ್ ರಾಜ್ ಭಯದಿಂದ ಜನ್ ಸುರಾಜ್ ಪರವಾಗಿದ್ದ ಒಂದಷ್ಟು ಜನ ಎನ್‌ಡಿಎಗೆ ಮತ ಹಾಕಿದ್ರು. ಈ ಎಲ್ಲ ಕಾರಣದಿಂದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದ್ರು.
