ಹೊಸ ವರ್ಷಕ್ಕೆ ಪುಷ್ಪಾ ಡೈರೆಕ್ಟರ್ ಜೊತೆ ರಾಮ್‌ಚರಣ್ ಸಿನಿಮಾ..!?

Public TV
1 Min Read

ಗ್ಲೋಬಲ್‌ಸ್ಟಾರ್ ರಾಮ್‌ಚರಣ್ (Ram Charan) ಸದ್ಯ ಪೆದ್ದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗೇಮ್ ಚೇಂಜರ್ ಸಿನಿಮಾ ಬಳಿಕ ರಾಮ್‌ಚರಣ್ ತೊಡಗಿಕೊಂಡಿರುವ ಸಿನಿಮಾ. ಸಣ್ಣ ಗ್ಲಿಂಪ್ಸ್‌ನಿಂದಲೇ ಸಖತ್ ಅಟ್ರ್ಯಾಕ್ಟ್ ಮಾಡಿರುವ ಪೆದ್ದಿ ಕಲ್ಟ್ ಆ್ಯಂಡ್ ಕ್ಲಾಸಿಕ್ ಎಲಿಮೆಂಟ್ಸ್ ರಿವೀಲ್ ಆಗಿದೆ. ಪೆದ್ದಿ ಸ್ಯಾಂಪಲ್ಸ್‌ಗೆ ರಾಮ್‌ಚರಣ್ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬುಚ್ಚಿ ಬಾಬು ಸನಾ ನಿರ್ದೇಶನ ಮಾಡ್ತಿರುವ ಈ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ (Shiva Rajkumar) ಕೂಡಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಜಬರ್‌ದಸ್ತ್ ಪೋಸ್ಟರ್ ರಿಲೀಸ್ ಮಾಡಿತ್ತು. ರಾಮ್‌ಚರಣ್ ಅಡ್ಡಾದಿಂದ ಗುಡ್‌ ನ್ಯೂಸ್‌ವೊಂದು ಬಂದಿದೆ. ಇದನ್ನೂ ಓದಿ: ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

ರಾಮ್‌ಚರಣ್ ಪೆದ್ದಿ ಸಿನಿಮಾವನ್ನ ನವೆಂಬರ್ ಮುಗಿಯುವ ಹೊತ್ತಿಗೆ ಕಂಪ್ಲೀಟ್ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಬರುವ ಹೊಸ ವರ್ಷಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೌದು, ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ (Sukumar) ಜೊತೆ ಆರ್‌ಸಿ-17 ಸಿನಿಮಾ ಮಾಡುವ ಪ್ರಯತ್ನಗಳು ತೆರೆಮರೆಯಲ್ಲಿ ಈಗಿನಿಂದಲೇ ನಡೆಯುತ್ತಿವೆಯಂತೆ.

ಹೊಸ ವರ್ಷ ಬರುವಷ್ಟರಲ್ಲೇ ಪೆದ್ದಿ ಸಿನಿಮಾದ ಎಲ್ಲಾ ಕೆಲಸಗಳನ್ನ ಮುಗಿಸಿ ಸುಕುಮಾರ್ ಜೊತೆಗಿನ ಚಿತ್ರಕ್ಕೆ ರಾಮ್‌ಚರಣ್ ತಯಾರಿ ನಡೆಸಲಿದ್ದಾರಂತೆ. ಚಿತ್ರದ ಟೈಟಲ್ ಏನು..? ಇನ್ನು ಸಿನಿಮಾದಲ್ಲಿ ಯಾರೆಲ್ಲ ಸೇರಿಕೊಳ್ಳಲಿದ್ದಾರೆ ಒಂದೊಂದೇ ರಿವೀಲ್ ಆಗಲಿದೆ. ಇದನ್ನೂ ಓದಿ: ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

Share This Article