ಮತ್ತೆ ‘ಗೇಮ್ ಚೇಂಜರ್’ ನಿರ್ದೇಶಕನ ಹೊಸ ಚಿತ್ರಕ್ಕೆ ಕೈಜೋಡಿಸಿದ್ರಾ ರಾಮ್ ಚರಣ್?

Public TV
1 Min Read

ಟಾಲಿವುಡ್ (Tollywood) ನಟ ರಾಮ್ ಚರಣ್ ಅವರು ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಇದರ ನಡುವೆ ಮೆಗಾ ಸ್ಟಾರ್ ಪುತ್ರನ ಗೇಮ್ ಚೇಂಜರ್ ಸಿನಿಮಾ ಅಪ್‌ಡೇಟ್ ಕಾಯ್ತಿದ್ದ ಫ್ಯಾನ್ಸ್‌ಗೆ, ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ‘ಗೇಮ್ ಚೇಂಜರ್’ ಸಿನಿಮಾದ ನಿರ್ದೇಶಕ ಎಸ್.ಶಂಕರ್ ಜೊತೆಗೆನೇ ಹೊಸ ಸಿನಿಮಾಗೆ ಕೈ ಜೋಡಿಸುತ್ತಾರಂತೆ.

ಮುದ್ದು ಮಗಳ ಆಗಮನದಿಂದ ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗಳ ಪಾಲನೆಯಲ್ಲಿ ರಾಮ್ ಚರಣ್ ದಂಪತಿ ಬ್ಯುಸಿಯಿದ್ದಾರೆ. ಜೊತೆಗೆ ಹೊಸ ಪ್ರಾಜೆಕ್ಟ್‌ಗಳ ಕಡೆ ಕೂಡ ಗಮನ ಕೊಡ್ತಿದ್ದಾರೆ. ಆರ್‌ಆರ್‌ಆರ್ ಹೀರೋ ಚರಣ್, ಗೇಮ್ ಚೇಂಜರ್ ಸಿನಿಮಾದ ನಂತರ ಮುಂದೇನು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

ರಾಮ್ ಚರಣ್ ಗೇಮ್ ಚೇಂಜರ್ ಬಳಿಕ ಯಾವುದೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ ‘ಗೇಮ್ ಚೇಂಜರ್’ ನಂತರವೇ ಹೊಸ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಈ ತಿಂಗಳಲ್ಲಿಯೇ ಈ ಕುರಿತು ಬಿಗ್ ಅಪ್ಡೇಟ್ ಹೊರಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಗೇಮ್ ಚೇಂಜರ್’ ಶೂಟಿಂಗ್ ಸಮಯದಲ್ಲೇ ನಟ ರಾಮ್‌ನ ನಿರ್ದೇಶಕ ಶಂಕರ್ (S.Shankar) ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹೊಸ ಪ್ರಾಜೆಕ್ಟ್‌ಗೆ ಚರಣ್ ಕಾಲ್‌ಶೀಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜಾನಾ? ಎಂಬುದನ್ನ ಮುಂದಿನ ದಿನಗಳವರೆಗೂ ಕಾಯಬೇಕಿದೆ. ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಕೊನೆಯ ಹಂತದ ಕೆಲಸಗಳು ಜರುಗುತ್ತಿದೆ. ಸದ್ಯದಲ್ಲೇ ಎಲ್ಲದರ ಅಪ್‌ಡೇಟ್ ಹೊರಬೀಳಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್