ರಾಮ್ ಚರಣ್ ಶರ್ಟ್ ಹರಿದ ಅಭಿಮಾನಿಗಳು- ಅಷ್ಟಕ್ಕೂ ಆಗಿದ್ದೇನು?

Public TV
1 Min Read

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ (Ram Charan) ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ (Pawan Kalyan) ಪರ ಪ್ರಚಾರ ಮಾಡಲು ಪೀಠಾಪುರಂಗೆ ತೆರಳಿದ್ದ ವೇಳೆ, ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ರಾಮ್ ಚರಣ್ ಶರ್ಟ್ ಅನ್ನು ಅಭಿಮಾನಿಗಳು ಹರಿದು ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ:ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್‌ (Pawan Kalyan) ಪರ ಪ್ರಚಾರ ಮಾಡಲು ರಾಮ್ ಚರಣ್ ಮತ್ತು ಅವರ ತಾಯಿ ಸಾಥ್ ನೀಡಿದ್ದರು. ಚುನಾವಣಾ ಪ್ರಚಾರಕ್ಕಾಗಿ ಪೀಠಾಪುರಂಗೆ ನಟ ಬಂದಿದ್ದಾರೆ. ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಜನಸಾಗರವೇ ಸೇರಿತ್ತು.

ಈ ವೇಳೆ, ರಾಮ್ ಚರಣ್ ಅನ್ನು ಅಭಿಮಾನಿಗಳು ಮುತ್ತಿಕೊಂಡರು. ರಾಮ್ ಚರಣ್ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರು. ಅಭಿಮಾನಿಗಳು ನಟನನ್ನು ತಳ್ಳಿದರು, ನೂಕಿದರು, ಅವರ ಶರ್ಟ್ ಅನ್ನು ಹರಿದರು. ಅಭಿಮಾನಿಗಳ ವರ್ತನೆಗೆ ಸುಸ್ತಾದ್ರು ರಾಮ್ ಚರಣ್. ಆದರೂ ಏನೂ ಪ್ರತಿಕ್ರಿಯೆ ನೀಡದೆ ಸಹಿಸಿಕೊಂಡು ಕಾರಿನಲ್ಲಿ ಕುಳಿತುಕೊಂಡರು.

ರಾಮ್ ಚರಣ್ ಕಂದು ಬಣ್ಣದ ಶರ್ಟ್ ಅನ್ನು ಧರಿಸಿ ಪ್ರಚಾರಕ್ಕೆ ಬಂದಿದ್ದರು. ಆದರೆ ಫ್ಯಾನ್ಸ್ ಎಳೆದಾಡಿ ಆ ಶರ್ಟ್ ಅನ್ನು ಹರಿದು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಟಾರ್ ಆದರೆ ಬೆಲೆ ತೆರಲೇಬೇಕು ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸ್ಟಾರ್ ನಟನಿಗೆ ಸರಿಯಾದ ಭದ್ರತೆ ಕೊಡದೇ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article