ನಿಂತ ಕೆಲಸ ಮತ್ತೆ ಆರಂಭಿಸಿ – ಡಿಕೆಶಿ ನಿವಾಸಕ್ಕೆ ತೆರಳಿ ಮುನಿರತ್ನ ಮನವಿ

1 Min Read

ಬೆಂಗಳೂರು: ನನ್ನ ಕ್ಷೇತ್ರದಲ್ಲಿ ನಿಂತ ಕೆಲಸ ಪುನರಾರಂಭಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar)  ಭರವಸೆ ನೀಡಿದ್ದಾರೆ ಎಂದು ಆರ್‌ಆರ್‌ ನಗರದ (RR Nagara) ಬಿಜೆಪಿ ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಡಿಸಿಎಂ ಡಿಕೆಶಿ ಭೇಟಿ ಮಾಡಿದ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಕೆಲಸ ತುಂಬಾ ಬಾಕಿ ಇದೆ ಭೇಟಿಗೆ ಸಮಯ ಕೊಡಿ ಎಂದು ವಿಶೇಷ ಅಧಿವೇಶನದಲ್ಲೆ ಕೇಳಿದ್ದೆ. ಇವತ್ತು ಸಮಯ ಕೊಟ್ಟಿದ್ದರು. ಅದರಂತೆ ಬಂದು ಭೇಟಿಯಾಗಿದ್ದೇವೆ. ನಿಂತ ಕೆಲಸ ಪುನರಾರಂಭಕ್ಕೆ ಡಿಸಿಎಂ ಡಿಕೆಶಿ ಭರವಸೆ ನೀಡಿದ್ದಾರೆ ಎಂದರು.  ಇದನ್ನೂ ಓದಿ: ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ – 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

 

 ಕಾಮಗಾರಿಗಳ ಪಟ್ಟಿ ಮಾಡಿಕೊಂಡು ಕೊಟ್ಟಿದ್ದೇನೆ. ಬೇಗ ಕಾಮಗಾರಿಗಳನ್ನು ಶುರುಮಾಡುವುದಕ್ಕೆ ಆಯುಕ್ತರಿಗೆ ಸೂಚನೆ ಕೊಡುತ್ತೇನೆ ಎಂಬ ಭರವಸೆ ಕೊಟ್ಟಿದ್ದಾರೆ. ಆ ಭರವಸೆ ಮೇಲೆ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು.

ಡಿಕೆ ಶಿವಕುಮಾರ್‌ ಮೇಲೆ ಭರವಸೆ ಇದ್ದು ಮೂರು ವರ್ಷ ಕಾದಿದ್ದೇನೆ. ನನ್ನ ಕ್ಷೇತ್ರದ ಕೆಲಸ ಆಗಬೇಕು ಅಂದರೆ ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ. ಕ್ಷೇತ್ರದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಹಿಂದೆ ಆರೋಪ ಮಾಡಿದ್ದ ವಿಚಾರ ಸಮಯ, ಸಂದರ್ಭ, ಪರಿಸ್ಥಿತಿ ಎಲ್ಲವೂ ಬೇರೆ ಅವತ್ತಿಂದು ಬೇರೆ, ವಿಭಿನ್ನ ಸನ್ನಿವೇಶ ಎಂದರು.

Share This Article