ದರ್ಶನ್‍ಗೆ ಟೀ, ಸಿಗರೇಟ್ ಕೊಟ್ಟಿದ್ಯಾರು? – ರಾಜಾತಿಥ್ಯ ಕೇಸ್ ಚಾರ್ಜ್‍ಶೀಟ್‍ಗೆ ಸಿದ್ಧತೆ

Public TV
1 Min Read

– ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder case) ಆರೋಪಿ ನಟ ದರ್ಶನ್‍ಗೆ (Darshan) ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಕೊಟ್ಟ ಪ್ರಕರಣದ ತನಿಖೆ ಮುಕ್ತಾಯವಾಗಿದೆ. ಪ್ರಕರಣದ ಚಾರ್ಜ್‍ಶೀಟ್‍ಗೆ ಪರಪ್ಪನ ಅಗ್ರಹಾರ ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿರುವಾಗ (Parappana Agrahara Jail) ರಾಜಾತಿಥ್ಯದ ಫೋಟೋಗಳು ವೈರಲ್ ಆಗಿತ್ತು. ಆದಾದ ಬಳಿಕ ದರ್ಶನ್ ವಿರುದ್ಧ ಎರಡು ಎಫ್‍ಐಆರ್ ಹಾಗೂ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ಒಂದು ಕೇಸ್ ದಾಖಲಾಗಿತ್ತು. ಈ 3 ಪ್ರಕರಣಗಳನ್ನು ಮೂವರು ಅಧಿಕಾರಿಗಳು ತನಿಖೆ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್‌, ದಾಳಿಕೋರ ಸಿಕ್ಕಿದ್ದು ಹೇಗೆ?

ಹುಳಿಮಾವು ಇನ್ಸ್‌ಪೆಕ್ಟರ್‌, ನಟ ದರ್ಶನ್‍ಗೆ ಸಿಗರೇಟ್, ಟೀ, ಚೇರ್ ಕೊಟ್ಟಿದ್ಯಾರು ಎಂಬುದರ ಬಗ್ಗೆ ತನಿಖೆ ಮಾಡಿದ್ದಾರೆ. ದರ್ಶನ್‍ಗೆ ಚೇರ್, ಟೀ, ಸಿಗರೇಟ್ ಅಧಿಕಾರಿಗಳೇ ವಿಲ್ಸನ್ ಗಾರ್ಡನ್ ನಾಗನ ಮೂಲಕ ಸಪ್ಲೈ ಮಾಡಿಸಿರೋದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನೂ ಬೇಗೂರು ಇನ್ಸ್‌ಪೆಕ್ಟರ್‌, ರೌಡಿಶೀಟರ್ ಮಗ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದಾಗ ಆರೋಪಿ ದರ್ಶನ್ ಮಾತನಾಡಿರುವ ಬಗ್ಗೆ ತನಿಖೆ ಮಾಡಿ ಮುಗಿಸಿದ್ದಾರೆ. ಆರೋಪಿ ವಿಡಿಯೋ ಕಾಲ್‍ಗೆ ಬಳಸಿರುವ ಮೊಬೈಲ್ ಅಕ್ರಮವಾಗಿ ಅಧಿಕಾರಿಗಳ ಮೂಲಕ ಪಡೆದುಕೊಂಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

ಮೂರನೇ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಎಸಿಪಿ ತನಿಖೆ ಮಾಡಿದ್ದರು. ತನಿಖೆಯಲ್ಲಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕೈದಿಗಳನ್ನೇ ಬಳಸಿಕೊಂಡು ಕೆಲಸ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ – ರಾಜ್ಯದಲ್ಲಿ ಆತಂಕ

Share This Article