ರೌಡಿ ಸ್ಲಂ ಭರತನ ಎನ್‍ಕೌಂಟರ್ ಪ್ರಕರಣ- 12 ಮಂದಿ ಶಿಷ್ಯಂದಿರು ಅರೆಸ್ಟ್

Public TV
1 Min Read

ಬೆಂಗಳೂರು: ರೌಡಿ ಸ್ಲಂ ಭರತನ ಎನ್‍ಕೌಂಟರ್ ಆದ ನಂತರ ಉತ್ತರ ವಿಭಾಗ ಪೊಲೀಸರು ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ತಲಾಶ್ ಮುಂದುವರಿಸಿ, 12 ಮಂದಿ ಸ್ಲಂ ಭರತನ ಸಹಚರರನ್ನು ಅರೆಸ್ಟ್ ಮಾಡಿದ್ದಾರೆ.

ಭರತನ ಗರ್ಲ್ ಫ್ರೆಂಡ್ ವಕೀಲೆ ಎಂದು ಹೇಳಿಕೊಂಡಿರುವ ಮಾಲಾ ಮತ್ತು ಹಣಕಾಸು ವಿಚಾರದಲ್ಲಿ ಸಹಾಯ ಮಾಡುತ್ತಿದ್ದ ಪೂಜಾಳನ್ನು ಸಹ ಬಂಧಿಸಲಾಗಿದೆ. ಪೂಜಾ ಸ್ಲಂ ಭರತನ ತಂಗಿ ಎಂದು ಹೇಳಿಕೊಂಡಿದ್ದಳು. ಪೂಜಾಗೆ ಸ್ಲಂ ಭರತನ ಸಹಚರರು ಅಕ್ಕಾ ಎಂದೆ ಕರೆಯುತ್ತಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣಕಾಸು ನೀಡುತಿದ್ದ ಶಂಕರ, ನರಸಿಂಹ, ಸಂದೀಪ್ ಗೌಡ, ಚಂದನ್ ರುದ್ರೇಶ್ , ರವಿ. ಶಿವರಾಮ್ , ಜಿಮ್ ಶಾಂತ ಸೇರಿ ಹನ್ನೆರಡು ಜನ ಅರೆಸ್ಟ್ ಆಗಿದ್ದಾರೆ.

ಆರೋಪಿಗಳು ಸ್ಲಂ ಭರತನ ಎಲ್ಲಾ ಕೃತ್ಯಗಳಲ್ಲಿಯೂ ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ನಂದಿನಿ ಲೇಔಟ್, ಪೀಣ್ಯ, ರಾಜಗೋಪಾಲನಗರ, ಸೋಲದೇವನಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಅಡಿ ಬಂಧಿಸಲಾಗಿದೆ. ಈ ಗ್ಯಾಂಗ್ ಮಾರಕಾಸ್ತ್ರ ತೋರಿಸಿ ಶ್ರೀನಿವಾಸ್ ಎಂಬವರ ಮನೆ ಮೇಲೆ ದಾಳಿ ಪ್ರಕರಣ, ದರೋಡೆ, ಪೊಲೀಸರ ಮೇಲೆ ಹಲ್ಲೆ ಪ್ರಕರಣದಲ್ಲಿ ಬೇಕಾಗಿತ್ತು.

ಪೂಜಾ, ಮಾಲಾ, ಬಾಗಲಗುಂಟೆ ಸಿದ್ದ, ಸ್ಲಂ ಮಧು, ನರಸಿಂಹ, ರುದ್ರೇಶ್, ಶಾಂತ್ ಕುಮಾರ್, ರವಿ, ಶಿವರಾಮ್, ಸಂದೀಪ್ ಸೇರಿ 12 ಜನರ ಗ್ಯಾಂಗ್ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸ್ಲಂ ಭರತ ಜೊತೆ ಡೀಲಿಂಗ್‍ಗೆ ಇಳಿದಿತ್ತು. ರಿಯಲ್ ಎಸ್ಟೇಟ್, ಅಣ್ಣ-ತಮ್ಮಂದಿರ ನಡುವಿನ ಆಸ್ತಿ ಜಗಳದಲ್ಲಿ ಭಾಗಿಯಾಗಿ ಡೀಲಿಂಗ್ ಮಾಡುತ್ತಿತ್ತು. ಪೂಜಾ ಸ್ಲಂ ಭರತನ ತೀರಾ ಹತ್ತಿರದ ಲೇಡಿ. ಎಲ್ಲಾ ಸಹಚರರಿಗೂ ಪೂಜಾಳಿಗೆ ಅಕ್ಕ ಅಂತಲೇ ಕರೆಯಬೇಕು ಅಂತ ಸ್ಲಂ ಭರತ್ ಸೂಚನೆ ನೀಡಿದ್ದನಂತೆ.

ಮಾಲಾ ಮತ್ತು ಪೂಜಾ

ಯಾವುದೇ ಕೃತ್ಯ ನಡೆದ ನಂತರ ಆರೋಪಿಗಳು ಎಸ್ಕೇಪ್ ಆಗಲು ಪೂಜಾ ಸಹಾಯಮಾಡುತ್ತಿದ್ದಳಂತೆ. ಮಾಲಾ ತಾನೊಬ್ಬಳು ವಕೀಲೆ ಅಂತ ಹೇಳಿಕೊಂಡಿದ್ದಳು ಎನ್ನಲಾಗಿದೆ. ಕೃತ್ಯ ನಡೆದ ಬಳಿಕ ಈಕೆಯೇ ಇಂಟರ್ನೆಟ್ ಕಾಲ್ ಮಾಡಿ ಸ್ಲಂ ಭರತನ ಲಿಂಕ್ ಕೊಡಿಸುತ್ತಿದ್ದಳು ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *