– ಕಾರಿನಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳಿಂದ ಏಕಾಏಕಿ ದಾಳಿ
ಶಿವಮೊಗ್ಗ: ನಗರದ ಜೆಪಿಎನ್ ರಸ್ತೆಯ ಸೂರ್ಯ ಕಂಫರ್ಟ್ ರೌಡಿಶೀಟರ್ ಓರ್ವನ ಹತ್ಯೆಯಾಗಿದೆ.
ರೌಡಿಶೀಟರ್ ಮಾರ್ಕೆಟ್ ಗಿರಿ ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ವೇಳೆಯಲ್ಲಿ ಮಾರ್ಕೆಟ್ ಗಿರಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿದ್ದನು. ಗಿರಿ ಕಾರಿನಲ್ಲಿ ಕುಳಿತಾಗ ದಾಳಿ ನಡೆಸಿದ ನಾಲ್ಕೈದು ಜನರು ದಾಳಿ ನಡೆಸಿದ್ದಾರೆ. ಈ ಕೊಲೆಯನ್ನು ಮಾರ್ಕೆಟ್ ಲೋಕಿ ಗ್ಯಾಂಗ್ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ. ಮಾರ್ಕೆಟ್ ಲೋಕಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದು, ಅವನ ಗ್ಯಾಂಗ್ ದಾಳಿ ನಡೆಸಿದೆಯಾ? ಎಂಬ ಶಂಕೆ ವ್ಯಕ್ತವಾಗಿವೆ.
ರೌಡಿ ಶೀಟರ್ ಆಗಿದ್ದ ಗಿರಿಯ ಅಪರಾಧ ಚಟುವಟಿಕೆಗಳಿಂದ ಹೊರಬಂದು ಹೂವಿನ ವ್ಯಪಾರ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದನು. ಇದೆಲ್ಲದೇ ಇತರೆ ವ್ಯವಹಾರಗಳಲ್ಲಿ ಗಿರಿ ತನ್ನನ್ನು ತೊಡಗಿಸಿಕೊಂಡಿದ್ದನು. ವ್ಯವಹಾರದ ವಿರೋಧಿಗಳೇನಾದ್ರೂ ಕೊಲೆ ಮಾಡಿಸಿದ್ರಾ ಎಂಬ ಅನುಮಾನಗಳು ಸಹ ವ್ಯಕ್ತವಾಗಿವೆ.
ಕೊಲೆಯ ಬಳಿಕ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೊಡ್ಡ ಪೇಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv