ತಾಯಿ ಎದುರೇ ರೌಡಿಶೀಟರ್‌ನನ್ನು ಅಟ್ಟಾಡಿಸಿ ಹತ್ಯೆಗೈದ ದುಷ್ಕರ್ಮಿಗಳು

Public TV
1 Min Read

ಮಂಗಳೂರು: ಒಂದು ವಾರದ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನಟೋರಿಯಸ್ ರೌಡಿಶೀಟರ್ ಓರ್ವನನ್ನು ಅಟ್ಟಾಡಿಸಿ ಹತ್ಯೆ ನಡೆಸಿದ ಘಟನೆ ಮಂಗಳೂರು (Mangaluru) ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.

ಉಳ್ಳಾಲದ ಕಡಪ್ಪಾರದ ಸಮೀರ್ ಎಂಬಾತ ಕೊಲೆಯಾದ ರೌಡಿಶೀಟರ್. ನಟೋರಿಯಸ್ ರೌಡಿ ಟಾರ್ಗೆಟ್ ಇಲಿಯಾಸ್‌ನ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಮೀರ್, ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಭಾನುವಾರ ರಾತ್ರಿ ಹೋಟೆಲ್‍ಗೆ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ. ಈ ವೇಳೆ ಹೋಟೆಲ್‍ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿತ್ತು. ಇದನ್ನೂ ಓದಿ: ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

ಇತ್ತೀಚೆಗೆ ಮಂಗಳೂರು ಜೈಲಿನೊಳಗೆ ಸಹ ಕೈದಿಗಳು ಸಮೀರ್ ಮೇಲೆ ದಾಳಿ ನಡೆಸಿದ್ದರು.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ (Police) ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪೂಜಾ ಖೇಡ್ಕರ್‌ಗೆ ತಾತ್ಕಾಲಿಕ ರಿಲೀಫ್ – ಬಂಧಿಸದಂತೆ ದೆಹಲಿ ಹೈಕೋರ್ಟ್ ಸೂಚನೆ

Share This Article