ಏರಿಯಾದಲ್ಲಿ ಹವಾ ಮೆಂಟೇನ್ ಮಾಡ್ಬೇಕು ಎಂದವ ರಸ್ತೆಯಲ್ಲಿ ಬರ್ಬರ ಕೊಲೆಯಾದ..!

Public TV
2 Min Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಏರಿಯಾದಲ್ಲಿ ಹವಾ ಮೆಂಟೇನ್ ಮಾಡಬೇಕೆಂದುಕೊಂಡು ಜೊತೆಯಲ್ಲಿ ಹುಡುಗರನ್ನು ಕಟ್ಟಿಕೊಂಡು ಸಣ್ಣಪುಟ್ಟ ಗಲಾಟೆಗಳನ್ನು ಮಾಡಿಕೊಳ್ಳುತ್ತಾ ಹೆಸರು ಮಾಡಲು ಹೋಗುತ್ತಿರುತ್ತಾರೆ. ಹೀಗೆಯೇ ಸಣ್ಣಪುಟ್ಟ ಗಲಾಟೆ ಮಾಡಿಕೊಂಡು ಮೆರೆಯಲು ಹೋದ ಯುವಕ ಕೊನೆಗೆ ಎದುರಾಳಿ ತಂಡದವರಿಂದ ಕೊಲೆಯಾಗಿದ್ದಾನೆ.

ಆನೇಕಲ್ ನಿವಾಸಿ ದೇವರಾಜು (23) ಕೊಲೆಯಾದ ಯುವಕ. ಈತ ಸಣ್ಣಪುಟ್ಟ ಗಲಾಟೆ ಮಾಡಿಕೊಂಡು ಏರಿಯಾದಲ್ಲಿ ಹವಾ ಮೆಂಟೇನ್ ಮಾಡೋದಿಕ್ಕೆ ಇಳಿದಿದ್ದ. ಈ ಹಿನ್ನೆಲೆಯಲ್ಲಿ ಇವನನ್ನು ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದರು. ಕೆಲ ತಿಂಗಳ ಹಿಂದೆ ಗಲಾಟೆಯೊಂದು ನಡೆದು ಕೊಲೆ ಯತ್ನದ ಕೇಸಿನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದು, ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದನು.

ಜೈಲಿನಿಂದ ಹೊರಬಂದಿದ್ದ ದೇವರಾಜ್ ತನ್ನ ಪಾಡಿಗೆ ತಾನು ಇದ್ದಿದ್ದರೆ ಇಂದು ಸಾಯುತ್ತಿರಲಿಲ್ಲ. ಆದರೆ ಒಂದು ಬಾರಿ ಜೈಲಿಗೆ ಹೋಗಿ ಬಂದದ್ದನ್ನೇ ನೆಪ ಮಾಡಿಕೊಂಡು ಫೀಲ್ಡಿಗೆ ಇಳಿದಿದ್ದನು. ಕೆಲದಿನಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಸುನೀಲ್ ರೌಡಿಯೊಬ್ಬನ ಹುಡುಗರೊಂದಿಗೆ ಕಿರಿಕ್ ಮಾಡಿಕೊಂಡಿದ್ದನು. ಸುನೀಲ್ ಜೈಲಿನಿಂದಲೇ ಫೋನ್ ಮಾಡಿ ತನ್ನ ಹುಡುಗರ ತಂಟೆಗೆ ಬರದಂತೆ ತಿಳಿಸಿದ್ದನು. ಆ ಸಂದರ್ಭದಲ್ಲಿ ದೇವರಾಜ್, ಸುನೀಲ್ ಗೆ ಮರ್ಯಾದೆ ಕೊಡದೆ ಮಾತನಾಡಿದ್ದನು.

ಇದರಿಂದ ರೊಚ್ಚಿಗೆದ್ದ ಸುನೀಲ್ ಜೈಲಿನಿಂದಲೇ ತನ್ನ ಹುಡುಗರಿಗೆ ಫೋನ್ ಮಾಡಿ ದೇವರಾಜನನ್ನು ಮುಗಿಸುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸುನೀಲ್ ನ ಹುಡುಗ ಮುನಿ ದೇವರಾಜನಿಗೆ ಫೋನ್ ಮಾಡಿ ಮಾತನಾಡಲು ಕರೆಸಿಕೊಂಡು ಎಂ.ಮೇಡಹಳ್ಳಿ ಬಳಿಯ ಲೇಔಟ್ ಒಂದರಲ್ಲಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೃತನ ಸ್ನೇಹಿತ ಸುರೇಶ್ ಹೇಳಿದ್ದಾರೆ.

ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ಸುನೀಲ್ ಫೀಲ್ಡ್ ನಲ್ಲಿ ಹೆಸರು ಮಾಡಬೇಕೆಂದಿದ್ದ ಮೃತ ದೇವರಾಜು ಮೇಲೆ ವೈಯಕ್ತಿಕ ದ್ವೇಷ ಇಟ್ಟಿದ್ದನು. ಸುನೀಲ್ ನ ಸಹಚರನಾದ ಮುನಿ ಹಾಗೂ ಲೋಕಿ, ದೇವರಾಜುಗೆ ಫೋನ್ ಮಾಡಿ ನಿನ್ನನ್ನು ಮರ್ಡರ್ ಮಾಡುತ್ತೇವೆ ನಿನ್ನ ಕೈಯಲ್ಲಿ ಏನು ಆಗುತ್ತದೆ ಅದು ಮಾಡಿಕೋ ಎಂದು ಧಮ್ಕಿ ಹಾಕಿದ್ದರು. ಕೊನೆಗೆ ಲೇಔಟ್ ಗೆ ಕರೆತಂದು ಕೊಲೆ ಮಾಡಿದ್ದಾರೆ ಎಂದು ಮೃತ ದೇವರಾಜು ಸ್ನೇಹಿತ ಹೇಳಿದ್ದಾರೆ.

ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *