ಮಟ್ಟಣ್ಣನವರ್ ಯಾಕೆ ನನ್ನನ್ನು ಅಧಿಕಾರಿ ಅಂದ್ರೋ ಗೊತ್ತಿಲ್ಲ: ರೌಡಿಶೀಟರ್ ಮದನ್ ಬುಗಡಿ

Public TV
1 Min Read

ಹುಬ್ಬಳ್ಳಿ: ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಹೇಳಿಕೊಂಡಿಲ್ಲ. ಗಿರೀಶ್ ಮಟ್ಟಣ್ಣನವರ್ ಯಾಕೆ ಹಾಗೆ ಹೇಳಿದ್ರು ಎಂದು ಗೊತ್ತಿಲ್ಲ ಎಂದು ರೌಡಿಶೀಟರ್ ಮದನ್ ಬುಗಡಿ (Madan Bugadi) ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿಯಂತ ಹೇಳಿಯೇ ಇಲ್ಲ. ಮಟ್ಟಣ್ಣನವರ್ ಯಾಕೆ ಹೇಳಿದ್ರು ಅಂತಾ ನನಗೆ ಅರ್ಥ ಆಗುತ್ತಿಲ್ಲ. ನನ್ನ ಮೇಲೆ ರೌಡಿಶೀಟರ್ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 8 ವರ್ಷದ ಬಳಿಕ ದೆಹಲಿ ಮೆಟ್ರೋ ದರ ಏರಿಕೆ

ಈಗ ನಾನು ಅದರಿಂದ ಹೊರಬಂದು ಉತ್ತಮ ಜೀವನ ನಡೆಸುತ್ತಿದ್ದೇನೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಕಮಿಷನರ್ ಶಶಿಕುಮಾರ್ ಅವರು ರೌಡಿ ಪೆರೇಡ್‌ನಲ್ಲಿ ನನಗೆ ಉತ್ತಮ ಮನುಷ್ಯ ಆಗು ಅಂತ ಕಿವಿ ಮಾತು ಹೇಳಿದ್ದಾರೆ ಅಷ್ಟೇ. ನನಗೂ ಗಿರೀಶ್ ಮಟ್ಟಣ್ಣನವರ್ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ. ನಾನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಹೇಳಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಫಂಡಿಂಗ್‌ ಬರ್ತಿತ್ತು ಅನ್ನೋದು ಸುಳ್ಳು, ಕೂಲಿ ಮಾಡಿದ್ರಷ್ಟೇ ಜೀವನ ನಡೀತಿತ್ತು – ಚಿನ್ನಯ್ಯನ 2ನೇ ಪತ್ನಿ ಕಣ್ಣೀರು

ಆ.24 ರಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ತಮ್ಮ ಪಕ್ಕ ನಿಂತಿದ್ದ ಮದನ್ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಗಿರೀಶ್‌ ಮಟ್ಟಣ್ಣನವರ್‌  (Girish Mattannavar) ಪರಿಚಯಿಸಿದ್ದರು. ಇದೀಗ ಮಟ್ಟಣ್ಣನವರ್ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share This Article