ಹಣ, ಹೆಣ್ಣಿಗಾಗಿ ಕೊಲೆ ಶಂಕೆ – ಕತ್ತು ಕೊಯ್ದು ರೌಡಿಶೀಟರ್ ಬರ್ಬರ ಹತ್ಯೆ

1 Min Read

ವಿಜಯಪುರ: ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಕತ್ತು ಕೊಯ್ದು ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ನಡೆದಿದೆ.

ಸಿದ್ದರಾಮ ದೊಂಡಿಬಾ ಕ್ಷತ್ರಿ (29) ಕೊಲೆಯಾದ ರೌಡಿಶೀಟರ್ ಎಂದು ತಿಳಿಯಲಾಗಿದೆ.ಇದನ್ನೂ ಓದಿ: ಇದು ದೂರದರ್ಶಿ ಬಜೆಟ್: ತೇಜಸ್ವಿ ಸೂರ್ಯ

ರೌಡಿಶೀಟರ್‌ನನ್ನು ಕೊಲೆ ಮಾಡಿ, ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹಣ ಹಾಗೂ ಹೆಣ್ಣಿಗಾಗಿ ಹತ್ಯೆಗೈದಿರಬಹುದು ಎಂದು ಪೊಲೀಸರ ಶಂಕಿಸಿದ್ದಾರೆ.

ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಜೆಟ್‌ ಭಾಷಣದಲ್ಲಿ ಯಾವ ರಾಜ್ಯಕ್ಕೆ ಏನು ಸಿಕ್ಕಿದೆ? ಚುನಾವಣಾ ರಾಜ್ಯಕ್ಕೆ ಏನು?

Share This Article