ನೆಲಮಂಗಲ ಪೊಲೀಸರಿಂದ ತಪ್ಪಿಸಿಕೊಂಡು ಮಣಿಪಾಲ್‌ ಪೊಲೀಸರಿಗೆ ಸಿಕ್ಕಿಬಿದ್ದ ಕ್ರಿಮಿನಲ್‌!

Public TV
1 Min Read

ಉಡುಪಿ: ಪರಾರಿಯಾಗಲು ಯತ್ನಿಸಿದ ಗರುಡ ಗ್ಯಾಂಗ್‌ನ (Garuda Gang) ಸದಸ್ಯನನ್ನು ಸಿನಿಮೀಯ ಶೈಲಿಯಲ್ಲಿ ಮಣಿಪಾಲ್ (Manipal) ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗರುಡ ಗ್ಯಾಂಗ್‍ನ ಕುಖ್ಯಾತ ಸದಸ್ಯ ಇಸಾಕ್ ಎಂದು ಗುರುತಿಸಲಾಗಿದೆ. ಆತ ಪೊಲೀಸರನ್ನು ನೋಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಆರೋಪಿಯ ಕಾರು ಡಿಕ್ಕಿಯಾಗಿದೆ.

ಪ್ರಕರಣವೊಂದರ ಸಂಬಂಧ ಆರೋಪಿಯನ್ನು ಬಂಧಿಸಲು ನೆಲಮಂಗಲ ಪೊಲೀಸರು ಬಂದಿದ್ದರು. ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ. ಆರೋಪಿಯನ್ನ ಬೆಂಬಿಡದೆ ಚೇಸ್ ಮಾಡಿದ ನೆಲಮಂಗಲ ಪೊಲೀಸರು, ಮಣಿಪಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಣಿಪಾಲ್ ಪೊಲೀಸ್‌ ಇನ್ಸ್‌ಪೆಕ್ಟರ್‌ ದೇವರಾಜ್,  ಆರೋಪಿಯನ್ನು ಚೇಸ್‌ ಮಾಡಿ ಮಣ್ಣ ಪಳ್ಳದ ಬಳಿ ಬಂಧಿಸಿದ್ದಾರೆ.

ಕಾರಿನಲ್ಲಿ ಆರೋಪಿಯ ಜೊತೆ ಓರ್ವ ಯುವತಿ ಪತ್ತೆಯಾಗಿದ್ದಾಳೆ. ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article