ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!

Public TV
2 Min Read

ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಚಕ ತಿರುವೊಂದು ಸಿಕ್ಕಿದೆ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಸುದ್ದಿ ಹರಡುತ್ತಿದ್ದಂತೆಯೇ, ಇತ್ತ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಪ್ಲಾನ್ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

ಘಟನೆ ನಡೆದ ಬಳಿಕ ಫರ್ಜಿ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳನ್ನೇ ಡಿಲೀಟ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಪಾರ್ಟಿ ಹಾಲ್ ನ ಒಂದೇ ಒಂದು ತುಣುಕು ಇರುವ ದೃಶ್ಯ ರಿಲೀಸ್ ಆಗಿಲ್ಲ. ಅಷ್ಟೇ ಅಲ್ಲದೇ ಪಾರ್ಕಿಂಗ್ ನಲ್ಲಿ ಇದ್ದ ಸಿಸಿಟಿವಿ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

ವಿಡಿಯೋದಲ್ಲೇನಿದೆ?: ಘಟನೆ ನಡೆದ ಬಳಿಕ ಒಂದು ವಿಡಿಯೋ ಲಭ್ಯವಾಗಿದ್ದು, ಪಾರ್ಟಿ ಹಾಲ್ ನಲ್ಲಿ ಗಲಾಟೆಯ ನಂತ ವಿದ್ವತ್ ಲಿಫ್ಟ್ ನಲ್ಲಿ ಇಳಿದು ಹೋಗಿದ್ದಾರೆ. ಫಸ್ಟ್ ಫ್ಲೋರ್ ನಲ್ಲಿ ಲಿಫ್ಟ್ ಇಳಿದ ವಿದ್ವತ್ ನನ್ನು ಮೆಟ್ಟಿಲುಗಳ ಮೇಲೆ ಹೊಡೆದು ಮತ್ತೆ ಪಾರ್ಟಿ ಹಾಲ್ ಗೆ ಎಳೆದುಕೊಂಡು ಹೋಗಿದ್ರು. ಮೆಟ್ಟಿಲುಗಳ ಮೇಲೆ ಎಳೆದುಕೊಂಡು ಹೋಗುವ ದೃಶ್ಯಾವಳಿ ಅದರಲ್ಲಿದೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

ಆ ಸಂದರ್ಭದಲ್ಲಿ ಪೊಲೀಸರು ಬಂದು ನಲಪಾಡ್ ನನ್ನು ಹಿಡಿಯೋದಾಗ್ಲಿ ಅಥವಾ ಹೊಡೆಯೋದನ್ನ ನಿಲ್ಲಿಸೋದಾಗ್ಲಿ ಮಾಡಿಲ್ಲ. ನಂತರ ವಿದ್ವತ್ ನನ್ನು ಪಾರ್ಕಿಂಗ್ ಗೆ ಕರೆದುಕೊಂಡು ಹೋದಾಗ ಪಿಎಸ್‍ಐ ಗಿರೀಶ್ ಎಂಟ್ರಿ ಕೊಟ್ಟಿದ್ದಾರೆ. ಗಿರೀಶ್ ಅವರು ಬರುತ್ತಿದ್ದಂತೆಯೇ ಪಾರ್ಕಿಂಗ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಯುತ್ತಾ ಇತ್ತು. ಈ ಬಗ್ಗೆ ಗೊತ್ತಿದ್ದರೂ ಗಿರೀಶ್ ಅವರು ಪಾರ್ಕಿಂಗ್ ಲಾಟ್ ಗೆ ಹೋಗದೇ ಪಾರ್ಟಿ ಹಾಲ್ ಗೆ ಹೋಗಿದ್ದಾರೆ. ನಂತರಪಾರ್ಟಿ ಹಾಲ್‍ನಿಂದ ಕೆಳಗೆ ಬಂದಾಗ ಆರೋಪಿ ನಲಪಾಡ್ ಫರ್ಜಿ ಕೆಫೆ ಮುಂದೆ ನಿಂತಿದ್ದನು. ಈ ವೇಳೆ ಗಿರೀಶ್ ನಲಪಾಡ್ ನನ್ನು ನೋಡಿಯೂ ಸುಮ್ಮನೇ ನಿಂತಿದ್ದಾರೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

ಶಾಸಕರ ಪುತ್ರ ಎನ್ನುವ ಕಾರಣಕ್ಕೆ ಪ್ರಕರಣದ ಆರಂಭದಲ್ಲೇ ಬೆಂಗಳೂರು ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪ, ಅನುಮಾನಗಳಿಗೆ ಪುಷ್ಠಿ ಎನ್ನುವಂತೆ ಸಿಸಿ ಕ್ಯಾಮೆರಾದ ದೃಶ್ಯವಾಳಿಗಳನ್ನು ದಿನ ಕಳೆದರೂ ಪೊಲೀಸರು ರಿಲೀಸ್ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ನಲಪಾಡ್ ಒಂದೊಂದೆ ಅಕ್ರಮಗಳು ಬಯಲಾಗುತ್ತಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಬೇಕಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಲೀಸ್ ಮಾಡಿದ್ದರೆ ಆ ಪಾರ್ಟಿಯಲ್ಲಿ ಯಾರೆಲ್ಲ ಭಾಗವಹಿಸಿದ್ದರು? ಘಟನೆ ಹೇಗಾಯ್ತು ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

https://www.youtube.com/watch?v=B-erXK9nl1M

https://www.youtube.com/watch?v=TIPtfcxi6O4

https://www.youtube.com/watch?v=vgXGeYC-QqU

https://www.youtube.com/watch?v=ETcXE9RXvXE

https://www.youtube.com/watch?v=bLWKOszy0uc

Share This Article
Leave a Comment

Leave a Reply

Your email address will not be published. Required fields are marked *