ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ

By
2 Min Read

ನವದೆಹಲಿ/ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿ ಕಾರ್ಯಾಚರಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಜ್ಞಾನ್ ರೋವರ್ (Pragyan Rover) ಚಂದ್ರನ ಮೇಲ್ಮೈನ ದತ್ತಾಂಶ ಸಂಗ್ರಹಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಜ್ಞಾನ್ ರೋವರ್ ದೊಡ್ಡದೊಂದು ಕುಳಿಗೆ ಮುಖಾಮುಖಿಯಾಗಿದೆ.

4 ಮೀಟರ್ ಸುತ್ತಳತೆ ಹೊಂದಿರುವ ಗುಂಡಿಯೊಂದನ್ನ ರೋವರ್ ಗುರುತಿಸಿದೆ. ಈ ಕುಳಿಯಿಂದ ಪ್ರಜ್ಞಾನ್ ರೋವರ್ 3 ಮೀಟರ್ ದೂರದಲ್ಲಿ ಇತ್ತು. ಹೀಗಾಗಿ ರೋವರ್‌ನ ಪಥ ಬದಲಾವಣೆಗೆ ಇಸ್ರೋ (ISRO) ನಿಯಂತ್ರಣ ಕೊಠಡಿ ಸೂಚನೆ ರವಾನಿಸಿತು. ಇದೀಗ ಹೊಸ ಹಾದಿಯಲ್ಲಿ ರೋವರ್ ಮುಂದೆ ಸಾಗಿದೆ ಎಂದು ಇಸ್ರೋ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್

ಸೋಮವಾರ ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಜ್ಞಾನ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತಾಗಿ ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗ ಸೂಚಿಸಿತು. ನಂತರ ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ

ಚಂದ್ರನ ಅಂಗಳದಲ್ಲಿ ಈಗಾಗಲೇ 4 ದಿನಗಳ ಕಾರ್ಯಾಚರಣೆ ನಡೆಸಿರುವ ಪ್ರಗ್ಯಾನ್ ರೋವರ್‌ಗೆ ಇನ್ನು ಕೇವಲ 10 ದಿನ ಮಾತ್ರ ಬಾಕಿ ಉಳಿದಿದೆ. ಚಂದ್ರನ ಮೇಲೆ ಒಂದು ದಿನ ಕಳೆಯಲು ಭೂಮಿಯ 14 ದಿನಗಳು ಆಗುತ್ತವೆ. ನಂತರದ 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದ ಮೇಲೆ ಕತ್ತಲು ಕವಿಯುತ್ತದೆ. ಹೀಗಾಗಿ ಈ 14 ದಿನಗಳ ಒಳಗೆ ಕಾರ್ಯಾಚರಣೆ ಮುಕ್ತಾಯಗೊಳಿಸಬೇಕಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಕತ್ತಲು ಕವಿಯುವ 14 ದಿನಗಳ ಬಳಿಕವೂ ರೋವರ್ ಜೀವಂತವಾಗಿದ್ದರೆ, ಅದನ್ನು ಮುಂದಿನ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾಗಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್