ಬೆಂಗಳೂರು: ನಾಲ್ಕು ವರ್ಷದ ಬಾಲಕನ ಮೇಲೆ ರಾಟ್ ವೀಲರ್ (Rottweiler) ನಾಯಿಯೊಂದು ಭೀಕರವಾಗಿ ದಾಳಿ (Dog Attack) ನಡೆಸಿದ ಘಟನೆ ಬನಶಂಕರಿಯ (Banashankari) 6ನೇ ಹಂತದ 7ನೇ ಕ್ರಾಸ್‌ನಲ್ಲಿ ನಡೆದಿದೆ.
ರಾಟ್ ವೀಲರ್ ನಾಯಿಯ ದಾಳಿಯ ದಾಳಿಗೆ ಬಾಲಕನ ಕಾಲಿನ ಮಾಂಸ ಖಂಡ ಕಿತ್ತು ಬಂದಿದೆ. ಬನಶಂಕರಿಯ ಮುನಿಯಲ್ಲಪ್ಪ ಎಂಬವರು ರಾಟ್ ವೀಲರ್ ನಾಯಿಯನ್ನ ಸಾಕಿದ್ದರು. ನಾಯಿಯನ್ನು ವಾಕಿಂಗ್ ಮಾಡಿಸುವುದಕ್ಕೆ ಬೆಲ್ಟ್ ಬಿಚ್ಚಿದ್ದರು. ಈ ವೇಳೆ ಬಾಲಕನನ್ನು ಕಂಡು ನಾಯಿ ಎಗರಿದೆ. ಇದನ್ನೂ ಓದಿ: ಮಹಿಳೆ ಬಲಿ ಪಡೆದ ರಾಟ್ ವೀಲರ್ ಮಾಲೀಕ ಅರೆಸ್ಟ್
ಬಿಜಿಎಸ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಕುಟುಂಬಸ್ಥರು ನಾಯಿ ಮಾಲೀಕರ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಮಹಿಳೆಯನ್ನು ಕಚ್ಚಿ ಕಚ್ಚಿ ಕೊಂದ ರಾಟ್ ವೀಲರ್

