ಮತ್ತೆ ಗೆದ್ದ ರೂಪೇಶ್ ಶೆಟ್ಟಿ : `ಜೈ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Public TV
2 Min Read

ಬಿಗ್‌ಬಾಸ್ ಮೂಲಕ ಮನೆ ಮಾತಾಗಿದ್ದ ರೂಪೇಶ್ ಶೆಟ್ಟಿ ಮತ್ತೆ ಕರುನಾಡ ಜನತೆ ಮುಂದೆ ತಮ್ಮೊಳಗಿನ ಹೊಸ ಟ್ಯಾಲೆಂಟ್ ನೊಂದಿಗೆ ಬಂದಿದ್ದಾರೆ. ಅವರ ಮಾತು ಗೊತ್ತಿತ್ತು, ನಟನೆಯು ಗೊತ್ತಿತ್ತು. ಆದ್ರೆ ಇಷ್ಟೊಂದು ಚಂದವಾಗಿ ನಿರ್ದೇಶನವನ್ನು ಮಾಡ್ತಾರೆ ಅನ್ನೋದು ಮಾತ್ರ ಜೈ ಮೂಲಕ ಗೊತ್ತಾಗಿದೆ. ರೂಪೇಶ್ ಶೆಟ್ಟಿ (Roopesh Shetty) ಅವರ ಜೈ ಸಿನಿಮಾ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ. ಬಾಲಿವುಡ್ ಸುನೀಲ್ ಶೆಟ್ಟಿ ನಟಿಸಿರುವ ಜೈ ಸಿನಿಮಾ ಈ ವಾರವಷ್ಟೇ ತೆರೆಗೆ ಬಂದಿದೆ. ರಿಲೀಸ್ ಗೂ ಮುನ್ನವೇ ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸುವ ಪ್ರಯತ್ನವಾಗಿತ್ತು. ಅಲ್ಲಿಯೇ ರೂಪೇಶ್ ಶೆಟ್ಟಿ ಅರ್ಧ ಗೆದ್ದಿದ್ರು. ದುಬೈ, ಮಂಗಳೂರು, ಉಡುಪಿ ಭಾಗದಲ್ಲೂ ರಿಲೀಸ್ ಗೂ ಮುನ್ನವೇ ಸಿನಿಮಾದ ಪ್ರೀಮಿಯರ್ ಮಾಡಲಾಗಿತ್ತು. ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗಿದೆ.ಇದನ್ನೂ ಓದಿ: ನಾನು 3 ಕೋಟಿ ಖರ್ಚು ಮಾಡಿ, ಸೈಟ್, ಕಾರು ಕೊಡ್ಸಿದ್ದೆ, ಆದ್ರೆ ಅವ್ಳು ಬೇರೆಯವನೊಂದಿಗೆ ಕಾಣಿಸಿಕೊಳ್ತಿದ್ಲು – ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ

ರೂಪೇಶ್ ಶೆಟ್ಟಿ ಸಿನಿಮಾಗೆ ಕನ್ನಡ ಇಂಡಸ್ಟ್ರಿಯ ಬಿಗ್ ಸ್ಟಾರ್ ಗಳೇ ಜೊತೆಯಾಗಿ ನಿಂತಿದ್ದಾರೆ. ಕಿಚ್ಚ ಸುದೀಪ್, ಶ್ರೀಮುರುಳಿ ಸೇರಿದಂತೆ ಹಲವರ ಬೆಂಬಲ ಸಿಕ್ಕಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಅವರಿಗೆ ಹಣ ನೀಡಿ ಅವರಿಂದಾನೇ ಟಿಕೆಟ್ ಖರೀದಿ ಮಾಡಿದ್ದಾರೆ. 501 ರೂಪಾಯಿ ಕೊಟ್ಟು ಸಿನಿಮಾ ನೋಡುವುದಾಗಿ ಹೇಳಿದ ಕಿಚ್ಚ ಚಿತ್ರತಂಡಕ್ಕೂ ಆಲ್ ದಿ ಬೆಸ್ಟ್ ಹೇಳಿದ್ರು.

ರೂಪೇಶ್ ಶೆಟ್ಟಿ ಅವರ ಜೈ ಸಿನಿಮಾ ಮಾಡಿದ ಸಾಧನೆ ಒಂದೆರಡಲ್ಲ. ರೂಪೇಶ್ ಶೆಟ್ಟಿ ಅವರ ಜೊತೆಗೆ ನಿಂತವರು ಹಲವರು. ಸಿನಿಮಾ ತಂಡದವರು ಸ್ಪೆಷಲ್ ಶೋ ಆರ್ಗನೈಸ್ ಮಾಡೋದನ್ನ ನೋಡಿದ್ದೇವೆ. ಆದ್ರೆ ರೂಪೇಶ್ ಶೆಟ್ಟಿ ಸ್ನೇಹಿತರು ಸೋನಿಯಾ ರೊಡ್ರಿಗಸ್ ಶೆಟ್ಟಿಒ, ಸಚಿನ್, ಭವಿಶ್ನ ಶೆಟ್ಟಿ, ಕಿರಣ್ ಅಂಧ್ಯಂತಾಯ, ದಿಶಿತ್ ಶೆಟ್ಟಿ, ಅನಿಲ್ ದಾಸ್ ಹೀಗೆ ಹಲವು ಸ್ನೇಹಿತರೇ ಶೋಗಳನ್ನ ಆಯೋಜನೆ ಮಾಡಿದ್ದಾರೆ. ಇದಕ್ಕಿಂತ ಸಿನಿಮಾ ತಂಡಕ್ಕೆ ಮತ್ತೊಂದು ಖುಷಿ ಉಂಟಾ.

ಮಂಗಳೂರು ಉಡುಪಿನಲ್ಲಿ ಜೈ ಮೂವಿ PAID ಪ್ರೀಮಿಯರ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದು, 6,000 ಜನ 15 ಪ್ಲಸ್ ಶೋಸ್ ಜೈ ಮೂವಿ ರಿಲೀಸ್ ಮುನ್ನವೇ ಹೊಸ ರೆಕಾರ್ಡ್ ಬರೆದಿದೆ. ಸಿನಿಮಾ ನೋಡಿದವರೆಲ್ಲ ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ, ಸುನೀಲ್ ಶೆಟ್ಟಿ ಅವರನ್ನು ತುಳು ಸಿನಿಮಾದಲ್ಲಿ ನೋಡಿದ ಖುಷಿ.. ಸಿನಿಮಾದಲ್ಲಿನ ಇನೊಸೆಂಟ್ ಕಥೆಯನ್ನೇ ಹೊಗಳುತ್ತಿದ್ದಾರೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಗೆದ್ದದ್ದಲ್ಲ, ಸಿನಿಮಾದಲ್ಲೂ ಗೆದ್ದಿದ್ದಾರೆ ಎಂಬ ಹೊಗಳಿಕೆಯ ಮಾತನ್ನ ಹೇಳ್ತಿದ್ದಾರೆ. ಹಾಗಾಗಿ ಜೈ ಮೂಲಕ ರೂಪೇಶ್ ಮತ್ತೆ ಗೆದ್ದಿದ್ದಾರೆ.ಇದನ್ನೂ ಓದಿ: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟಿ ನಯನತಾರಾ ದಂಪತಿ ಭೇಟಿ

Share This Article