ಗೆಳೆಯನನ್ನು ಕೊಂದು, ಕತೆ ಕಟ್ಟಿದ ಸ್ನೇಹಿತ ಪೊಲೀಸರ ಬಲೆಗೆ

Public TV
1 Min Read

ಮುಂಬೈ: ಯುವಕನೊಬ್ಬ ತನ್ನ ರೂಮ್‍ಮೇಟ್‍ಗೆ ಚಾಕುವಿನಿಂದ ಇರಿದು ಕೊಂದು, ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಗಣೇಶ್ ಮೃತನಾಗಿದ್ದಾನೆ. ಆರೋಪಿ ಅಶೋಕ್ ಮುಖಿಯಾಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ರೈಲಿನ ಕೆಳಗೆ ಗಣೇಶ್ ದೇಹವನ್ನು ಹಾಕಿ, ಅದೊಂದು ಅಪಘಾತವೆಂದು ಕತೆ ಕಟ್ಟಲು ಪ್ರಯತ್ನಿಸಿದ್ದ ಯುವಕ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಮೃತ ಯುವಕನ ಸ್ನೇಹಿತರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.

ನಡೆದಿದ್ದೇನು?: ಇಬ್ಬರೂ ಇತರ ಕೆಲವು ಸ್ನೇಹಿತರ ಜೊತೆಗೆ ಪಾಯಿಸರ್ ಚಾಲ್‍ನ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಬ್ಬರೂ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ರೂಮ್‍ಮೇಟ್‍ಗಳು ಎಲ್ಲಾ ಬಿಹಾರದ ಮಧುಬನಿಯ ಮೂಲದವರಾಗಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

ಒಂದು ತಿಂಗಳ ಹಿಂದಷ್ಟೇ ಗಣೇಶ್ ಬಿಹಾರದಿಂದ ಬಂದಿದ್ದ. ಗಣೇಶ್ ನನ್ನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ, ಆಕೆ ಬೇರೆಯವರೊಂದಿಗೆ ಸಂಬಂಧ ಇದೆ ಎಂದು ಹೇಳಿದ್ದನು. ಇದೇ ಕಾರಣಕ್ಕೆ ಆತನನ್ನ  ಕೊಲೆ ಮಾಡಿದ್ದೇನೆ ಎಂದು ಅಶೋಕ್ ಪೊಲೀಸರಿಗೆ ತಿಳಿಸಿದ್ದಾನೆ.

ಕಂಠಪೂರ್ತಿ ಕುಡಿದಿದ್ದ ಅವರ ನಡುವೆ ಮಾತಿಗೆ ಮಾತು ಬೆಳೆದು, ಅಶೋಕ್ ಗಣೇಶ್‍ಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ನಿಧಾನವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿನ ಕೆಳಗೆ ತಳ್ಳಿ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯಾದವನ ರೂಮ್‍ಮೇಟ್‍ಗಳನ್ನು ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *