10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!

Public TV
1 Min Read

ರೋಲೆಕ್ಸ್ ಎಂಬುದು ಉಗಾಂಡಾದ ಒಂದು ಆಹಾರವಾಗಿದೆ. ಇದು ಅಲ್ಲಿನ ಶ್ರೇಷ್ಠ ಆಹಾರವಾಗಿದ್ದು, ಪ್ರಸ್ತುತ ಎಲ್ಲೆಡೆ ಲಭ್ಯವಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಉಗಾಂಡಾದ ಆಹಾರವಾಗಿರುವ ರೋಲೆಕ್ಸ್ ಅನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದು ಮಾಡಲು ತುಂಬಾ ಸುಲಭವಾಗಿದ್ದು, ಕೇವಲ ಹತ್ತು ನಿಮಿಷದಲ್ಲಿ ತಯಾರಿಸಬಹುದು. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್

ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 2
ಹೆಚ್ಚಿದ ಈರುಳ್ಳಿ – ಸ್ವಲ್ಪ
ಹೆಚ್ಚಿದ ಟೊಮೆಟೊ – 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಹೆಚ್ಚಿದ ಹಸಿರು ಮೆಣಸಿನಕಾಯಿ – ಅರ್ಧ ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಪೆಪ್ಪರ್ ಪೌಡರ್ – ಅರ್ಧ ಚಮಚ
ಎಣ್ಣೆ ಅಥವಾ ಬೆಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಚಪಾತಿ – 1

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಬಳಿಕ ಅದಕ್ಕೆ ಎಣ್ಣೆ/ಬೆಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಆಮ್ಲೆಟ್ ರೀತಿ ಬೇಯಿಸಿಕೊಳ್ಳಿ.
* ಆಮ್ಲೆಟ್ ಚನ್ನಾಗಿ ಬೆಂದ ಬಳಿಕ ಅದನ್ನು ಪ್ಯಾನ್‌ನಿಂದ ತೆಗೆಯಿರಿ.
* ಈಗ ಆಮ್ಲೆಟ್ ಅನ್ನು ಚಪಾತಿ ಮೇಲೆ ಇರಿಸಿ ರೋಲ್ ಮಾಡಿ. ರೋಲೆಕ್ಸ್ ಸವಿಯಲು ಸಿದ್ಧ.
* ಮಕ್ಕಳು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನೂ ಓದಿ: ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ

Share This Article