ಕೇವಲ 10 ರನ್‌ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್‌

Public TV
2 Min Read

ಕೊಲಂಬೊ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ (Virat Kohli) ಜೋಡಿಯು ಶ್ರೀಲಂಕಾ (SriLanka) ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಕೇವಲ 10 ರನ್‌ ಗಳಿಸಿದ್ರೂ ಹೊಸ ದಾಖಲೆಯೊಂದನ್ನ ನಿರ್ಮಿಸಿದ್ದಾರೆ.

ಹೌದು. ಕಿಂಗ್‌ ಕೊಹ್ಲಿ ಹಾಗೂ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಜೋಡಿ ಲಂಕಾ ವಿರುದ್ಧ 16 ಎಸೆತಗಳಲ್ಲಿ 10 ರನ್‌ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಜೊತೆಯಾಟ ಪೂರೈಸಿದ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ರಾಹುಲ್‌ ಬೆಂಕಿ ಬ್ಯಾಟಿಂಗ್‌, ಕುಲ್ದೀಪ್‌ ಮಿಂಚಿನ ಬೌಲಿಂಗ್‌ – ಭಾರತಕ್ಕೆ 228 ರನ್‌ಗಳ ಜಯ, ಪಾಕ್‌ಗೆ ಹೀನಾಯ ಸೋಲು

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ (ಸೆ.12) ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 2 ರನ್ ಗಳಿಸುತ್ತಿದ್ದಂತೆ 5 ಸಾವಿರ ರನ್ ಜೊತೆಯಾಟ ಪೂರೈಸಿದ ರೋಹಿತ್- ಕೊಹ್ಲಿ ಜೋಡಿ ವೆಸ್ಟ್ ಇಂಡೀಸ್‌ ದಿಗ್ಗಜರಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ಡಿಸ್ಮೆಂಡ್ ಹೇನ್ಸ್ ಅವರ ಹೆಸರಿನಲ್ಲಿದ್ದ ಸುದೀರ್ಘ ಕಾಲದ ಜೊತೆಯಾಟದ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಹೈವೋಲ್ಟೇಜ್‌ ಕದನಕ್ಕೆ ಮತ್ತೆ ಮಳೆ ಕಾಟ – ಪಾಕ್‌ ತಂಡದ ಹಾದಿ ಇನ್ನಷ್ಟು ಕಠಿಣವಾಗುತ್ತಾ?

ವೇಗದ 5 ಸಾವಿರ ರನ್ ಪೂರೈಸಿದ ಜೋಡಿ: ಇದರೊಂದಿಗೆ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಜೋಡಿ ಅತಿ ವೇಗವಾಗಿ 5 ಸಾವಿರ ರನ್‌ ಜೊತೆಯಾಟ ನೀಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಗಾರ್ಡನ್ ಗ್ರೀನಿಡ್ಜ್- ಡೇಸ್ಮಂಡ್‌ ಹೇನೆಸ್‌ 97 ಇನ್ನಿಂಗ್ಸ್‌ನಲ್ಲಿ, ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಮತ್ತು ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ ಜೋಡಿ ತಲಾ 104 ಇನ್ನಿಂಗ್ಸ್‌ಗಳಲ್ಲಿ, ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ 112 ಇನ್ನಿಂಗ್ಸ್‌ಗಳಲ್ಲಿ, ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಜೋಡಿ 116 ಇನ್ನಿಂಗ್ಸ್‌ಗಳಲ್ಲಿ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ 123 ಇನ್ನಿಂಗ್ಸ್‌ಗಳಲ್ಲಿ ಹಾಗೂ ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ 124 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರೆ, ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಜೋಡಿ ಕೇವಲ 86 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: Asia Cup 2023ː ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿ ಮತ್ತೊಂದು ಮೈಲುಗಲ್ಲು

ಒಡಿಐನಲ್ಲಿ ಅತಿ ಹೆಚ್ಚು ರನ್ ಗಳ ಜೊತೆಯಾಟ: ಇನ್ನೂ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದವರ ಪೈಕಿ 8227 ರನ್ ಜೊತೆಯಾಟ ನೀಡಿದ ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ಮೊದಲ ಸ್ಥಾನದಲ್ಲಿದ್ದರೆ, ಮಹೇಲಾ ಜಯವರ್ಧನೆ-ಕುಮಾರ ಸಂಗಾಕ್ಕರ ಜೋಡಿ (5992 ರನ್ ), ತಿಲಕರತ್ನೆ ದಿಲ್ಷಾನ್-ಕುಮಾರ ಸಂಗಾಕ್ಕರ (5475 ರನ್), ಮಾರ್ವನ್ ಅಟ್ಟಪಟ್ಟು-ಸನತ್ ಜಯಸೂರ್ಯ (5462 ರನ್), ಆಡಂ ಗಿಲ್ ಕ್ರಿಸ್ಟ್-ಮ್ಯಾಥ್ಯೂ ಹೇಡನ್ (5409 ರನ್), ರೋಹಿತ್ ಶರ್ಮಾ-ಶಿಖರ್ ಧವನ್ (5193 ರನ್ ), ಗಾರ್ಡನ್ ಗ್ರೀನಿಡ್ಜ್-ಡೇಸ್ಮಂಡ್ ಹೇನೆಸ್‌ (5150 ರನ್), ಇದೀಗ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ (5008 ರನ್‌) ನಂತರದ ಸ್ಥಾನಗಳಲ್ಲಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್