ಸೌರವ್ ಗಂಗೂಲಿ, ದಿಲ್‍ಶಾನ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

Public TV
2 Min Read

ಸಿಡ್ನಿ: ಇಲ್ಲಿನ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ 22ನೇ ಶತಕ ಸಿಡಿಸಿದ್ದಾರೆ.

ಈ ಸಾಧನೆ ಮಾಡುವ ಮೂಲಕ ಹೆಚ್ಚು ಶತಕ ಸಿಡಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್‍ಶಾನ್ ಅವರನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ.

ರೋಹಿತ್ ಶರ್ಮಾ ಒಟ್ಟು 194 ಅಂತರಾಷ್ಟ್ರೀಯ ಏಕದಿನ ಮ್ಯಾಚ್‍ಗಳನ್ನು ಆಡಿದ್ದು, 22 ಶತಕ ಹಾಗೂ 37 ಅರ್ಧಶತಗಳ ದಾಖಲಿಸಿ, 7,587 ರನ್‍ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಅಂತರಾಷ್ಟ್ರೀಯ ಬ್ಯಾಟ್ಸ್ ಮನ್ ಸಾಲಿನಲ್ಲಿ ಒಂಬತ್ತನೇ ಸ್ಥಾನವನ್ನು ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ.

ಸಿಡ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ 18 ಎಸೆತಗಳನ್ನು ಎದುರಿಸಿದ್ದರೂ ರೋಹಿತ್ ಶರ್ಮಾ ಒಂದೇ ಒಂದು ರನ್ ಬಾರಿಸಿರಲಿಲ್ಲ. ಈ ವೇಳೆ ನೋ ಬಾಲ್ ಫ್ರಿ ಹಿಟ್‍ನಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದ ಹಿಟ್‍ಮ್ಯಾನ್ ಬೌಂಡರಿ, ಸಿಕ್ಸರ್ ಮೂಲಕ ರನ್ನ ಕಲೆಹಾಕಿ ಟೀಂ ಇಂಡಿಯಾ ಅಭಿಮಾನಿಗಳನ್ನು ರಂಜಿಸಿದರು. ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಮಹೇಂದ್ರ ಸಿಂಗ್ ಧೋನಿ ಆಸರೆಯಾದರು.

ವಿಕೆಟ್ ಕಾಯ್ದುಕೊಂಡು ನಿದಾನವಾಗಿ ಆಟವಾಡಿದ ಧೋನಿ, ರೋಹಿತ್‍ಗೆ ಸಾಥ್ ನೀಡಿದರು. ಆದರೆ ಎಲ್‍ಬಿಡ್ಲ್ಯು ಆದ ಧೋನಿ (51 ರನ್- 3ಬೌಂಡರಿ, ಒಂದು ಸಿಕ್ಸರ್‍ಗೆ) ಪೆವಲಿನ್‍ಗೆ ತೆರಳಿದರು. ಬಳಿಕ ಬಂದ ದಿನೇಶ್ ಕಾರ್ತೀಕ್ (12) ಹಾಗೂ ರವೀಂದ್ರ ಜಡೇಜಾ (8) ರನ್‍ಗೆ ವಿಕೆಟ್ ಒಪ್ಪಿಸಿದರು. ಏಕಾಂಗಿಯಾಗಿ ಹೋರಾಡಿದ ರೋಹಿತ್ ಶರ್ಮಾ 110 ಎಸೆತಗಳಲ್ಲಿ ಶತಕ ಪೂರೈಸಿ, ಏಕದಿನದಲ್ಲಿ 22ನೇ ಶತಕ ಸಾಧನೆ ಮಾಡಿದರು. ಶತಕದ ಬಳಿಕ ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ 129 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು.

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್ ಮನ್‍ಗಳು:

1. ಸಚಿನ್ ತೆಂಡೂಲ್ಕರ್: 49
2. ವಿರಾಟ್ ಕೊಹ್ಲಿ: 38
3. ರಿಕಿ ಪಾಂಟಿಂಗ್: 30
4. ಸನತ್ ಜಯಸೂರ್ಯ: 28
5. ಹಾಶೀಮ್ ಆಮ್ಲಾ: 26
6. ಎಬಿಡಿ ವಿಲಿಯರ್ಸ್: 25
7. ಕುಮಾರ ಸಂಗಕ್ಕರ: 25
8. ಕ್ರಿಸ್ ಗೇಲ್: 23
9. ಸೌರವ್ ಗಂಗೂಲಿ: 22
10. ತಿಲಕರತ್ನೆ ದಿಲ್‍ಶಾನ್: 22
11. ರೋಹಿತ್ ಶರ್ಮಾ: 22

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *