ಮುಂದಿನ ಪೀಳಿಗೆ ಬಗ್ಗೆ ಯೋಚಿಸಿ – ವಾಯು ಗುಣಮಟ್ಟ ಕುಸಿತದ ಬಗ್ಗೆ ರೋಹಿತ್‌ ಶರ್ಮಾ ಬೇಸರ

Public TV
2 Min Read

ಮುಂಬೈ: ವಾಣಿಜ್ಯ ನಗರಿಯಾದ ಮುಂಬೈ ಮತ್ತು ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿತದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬೆ ಹೈಕೋರ್ಟ್ ಮುಂಬೈನ (Mumbai) ವಾಯು ಗುಣಮಟ್ಟವನ್ನು (Air Quality) ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದೆ. ಈ ಬೆನ್ನಲ್ಲೇ ಮುಂಬೈನ ವಾಂಖೆಡೆ (Mumbai Wankhede Stadium) ಮತ್ತು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ (ನ.2) ಮತ್ತು ಸೋಮವಾರ (ನ.6) ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಬಳಸುವುದನ್ನು ಬಿಸಿಸಿಐ (BCCI) ನಿಷೇಧಿಸಿದೆ.

ಈ ನಡುವೆ ಇಲ್ಲಿನ ವಾಯು ಗುಣಮಟ್ಟ ಕುಸಿದ ಬಗ್ಗೆ ಮಾತನಾಡಿರುವ ರೋಹಿತ್‌ ಶರ್ಮಾ, ನಾನು ಯಾವಾಗಲೂ ವಾಯು ಮಾಲಿನ್ಯದ ಬಗ್ಗೆ ಮಾತನಾಡ್ತೇನೆ, ಜನರನ್ನ ಎಜುಕೇಟ್‌ ಮಾಡ್ತೇನೆ. ಏಕೆಂದರೆ ನಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

ಮುಂಬೈ ಮತ್ತು ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಕಾರ್ಯದರ್ಶಿ ಜಯ್‌ ಶಾ ಬುಧವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧ, ಸೋಮವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka) ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನಲ್ಲಿ ನವೆಂಬರ್‌ 7 ರಂದು ಆಸೀಸ್‌ ಮತ್ತು ಅಫ್ಘಾನಿಸ್ತಾನ ನಡುವೆ ಮತ್ತು ನವೆಂಬರ್‌ 15ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದೆ.

ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂದು ಸಿಂಹಳಿಯರ ಸವಾಲ್‌ – ಸೆಮೀಸ್‌ಗೆ ಲಗ್ಗೆಯಿಡಲು ತವಕ; ಲಂಕಾ ಪಂದ್ಯಕ್ಕೂ ಪಾಂಡ್ಯ ಔಟ್‌? 

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬೈನಲ್ಲಿ ಗಾಳಿಯ ಗುಣಮಟ್ಟದ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 260ರ ಆತಂಕಕಾರಿ ಮಟ್ಟವನ್ನು ಮುಟ್ಟಿತ್ತು. ದೆಹಲಿಯಲ್ಲಿ, ಈ ಅಕ್ಟೋಬರ್‌ನಲ್ಲಿ ವಾಯು ಗುಣಮಟ್ಟವು 2020ರಿಂದ ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್