‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’: ರೋಹಿತ್ ಶರ್ಮಾ

Public TV
1 Min Read

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಪಡೆದರೂ, ಶಾಶ್ವತ ಸ್ಥಾನ ಪಡೆಯಲು ಕೇದಾರ್ ಜಾಧವ್ ವಿಫಲರಾಗಿದ್ದು, 2019ರ ವಿಶ್ವಕಪ್ ನಲ್ಲೂ ಕೇದಾರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಈ ನಡುವೆ ಕೇದಾರ್ ಜಾಧವ್‍ರ ಇನ್‍ಸ್ಟಾ ಪೋಸ್ಟ್ ಗೆ ರೋಹಿತ್ ಶರ್ಮಾ ಆಸಕ್ತಿದಾಯಕ ಕಾಮೆಂಟ್ ಮಾಡಿ ಗಮನ ಸೆಳೆದಿದ್ದಾರೆ.

ಕೇದಾರ್ ಜಾಧವ್ ತಮ್ಮ ಇನ್‍ಸ್ಟಾದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ತೆಗೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’ ಎಂದಿದ್ದಾರೆ. ರೋಹಿತ್ ಶರ್ಮಾ, ಕೇದಾರ್ ಜಾಧವ್ ಅವರೊಂದಿಗೆ ಇರುವ ಸ್ನೇಹದ ಕಾರಣ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಜಾಧವ್ ಪೋಸ್ಟ್ ಗೆ ರೋಹಿತ್ ನೀಡಿರುವ ಪ್ರತಿಕ್ರಿಯೆ ಇನ್‍ಸ್ಟಾದಲ್ಲಿ ಹೆಚ್ಚು ಪಾಪ್ಯುಲರ್ ಆಗಿದೆ.

https://www.instagram.com/p/B5o_AZ_F0iz/

ಇತ್ತೀಚೆಗೆ ನಡೆದ ಸೈಯ್ಯದ್ ಅಲಿ ಮುಷ್ತಾಕ್ ಟಿ-20 ಟ್ರೋಫಿಯಲ್ಲೂ ಜಾಧವ್ ಕಳಪೆ ಪ್ರದರ್ಶನ ತೋರಿದ್ದರು. ಏಕದಿನ ಕ್ರಿಕೆಟ್‍ನಲ್ಲಿ 2 ಶತಕ, 6 ಅರ್ಧ ಶತಕ ಗಳಿಸಿರುವ ಜಾಧವ್‍, ಟಿ-20 ಮಾದರಿಯಲ್ಲಿ 9 ಪಂದ್ಯಗಳಿಂದ 122 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಡಿ.15 ರಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಕೇದಾರ್ ಜಾಧವ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸ್ಥಾನ ಪಡೆದಿದ್ದು, ಏಕದಿನ ಸರಣಿಗೂ ಮುನ್ನ ಡಿ.06 ಶುಕ್ರವಾರ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.

Share This Article
Leave a Comment

Leave a Reply

Your email address will not be published. Required fields are marked *