ನಾಯಕನಾಗಿ ಮೊದಲ ಸರಣಿ ಆರಂಭಕ್ಕೂ ಮುನ್ನ ರೋಹಿತ್‍ಗೆ ಕಂಟಕ

Public TV
1 Min Read

ಮುಂಬೈ: ಟೀಂ ಇಂಡಿಯಾದ ಸೀಮಿತ ಓವರ್‌ಗಳ ನಾಯಕ, ಟೆಸ್ಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಗಾಯಳುವಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಮುಂಬೈನಲ್ಲಿ ತರಬೇತಿ ಶಿಬಿರದಲ್ಲಿದ್ದರು. ಈ ತರಬೇತಿ ಶಿಬಿರದಲ್ಲಿ ಟೆಸ್ಟ್ ತಂಡದ ಉಪನಾಯಕ ರೋಹಿತ್ ಗಾಯಳುವಾಗಿ ಇದೀಗ ಟೆಸ್ಟ್ ಸರಣಿಯಿಂದ ಔಟ್ ಆಗಿದ್ದಾರೆ. ಇವರ ಜಾಗಕ್ಕೆ ಪ್ರಿಯಾಂಕ್ ಪಾಂಚಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ನಾಯಕತ್ವ ಪಟ್ಟದಿಂದ ಇಳಿಸಿದ್ದಕ್ಕೆ ಸಿಟ್ಟು? – ಅಭ್ಯಾಸ ಶಿಬಿರಕ್ಕೆ ಕೊಹ್ಲಿ ಗೈರು

ಬಿಸಿಸಿಐ ಏಕದಿನ ತಂಡದ ನಾಯಕರಾದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ಟಿ20 ಮತ್ತು ಏಕದಿನ ತಂಡಕ್ಕೆ ನಾಯಕನಾಗಿ ನೇಮಿಸಿತು. ಹಾಗಾಗಿ ಕೊಹ್ಲಿಗೆ ಬಿಸಿಸಿಐ ವಿರುದ್ಧ ಅಸಮಾಧಾನ ಮೂಡಿದೆ ಎಂದು ವರದಿಯಾಗಿತ್ತು. ಈ ನಡುವೆ ಕೊಹ್ಲಿ ತರಬೇತಿ ಶಿಬಿರಕ್ಕೂ ಗೈರಾಗಿದ್ದರು.. ಇದೀಗ ರೋಹಿತ್ ಶರ್ಮಾ ಗಾಯಳುವಾಗಿ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

ಸೀಮಿತ ಓವರ್‌ಗಳ ತಂಡದ ನಾಯಕನಾಗಿ ಟೆಸ್ಟ್ ತಂಡದ ಉಪನಾಯನಾಗಿ ಆಯ್ಕೆಯಾಗಿ ಮೊದಲ ಸರಣಿಯಲ್ಲಿಯೇ ರೋಹಿತ್ ಗಾಯಳುವಾಗಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *