ಹಿಟ್‌ಮ್ಯಾನ್‌ ಅಬ್ಬರಕ್ಕೆ ಅಫ್ರಿದಿ ದಾಖಲೆ ನುಚ್ಚುನೂರು – ಸಿಕ್ಸರ್‌ ವೀರರಿಗೆ ಈಗ ರೋಹಿತ್‌ ಬಾಸ್‌

1 Min Read

ರಾಂಚಿ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹಿಟ್‌ ಮ್ಯಾನ್‌ ರೋಹಿತ್‌‌ ಶರ್ಮಾ (Rohit Sharma) ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇಲ್ಲಿನ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರೋಹಿತ್‌ ಮೂರು ಸಿಕ್ಸರ್‌ ಸಿಡಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ನಂ.1 ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: 2027 World Cup | ರೋಹಿತ್‌, ಕೊಹ್ಲಿ ಭವಿಷ್ಯದ ಬಗ್ಗೆ ನಿರ್ಧರಿಸಲು ಬಿಸಿಸಿಐ ಹೈವೋಲ್ಟೇಜ್‌ ಸಭೆ

ಮಾರ್ಕೋ ಜಾನ್ಸನ್‌ ಅವರ ಪಾಲಿನ 5ನೇ ಈವರ್‌ನ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 352 ಸಿಕ್ಸರ್‌ ಪೂರೈಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 351 ಸಿಕ್ಸರ್‌ ಸಿಡಿಸಿದ್ದ ಪಾಕ್‌ ಮಾಜಿ ನಾಯಕ ಶಾಹಿದ್‌ ಅಫ್ರಿದಿ (Shahid Afridi) ಅವರ ದಾಖಲೆನನ್ನ ನುಚ್ಚುನೂರು ಮಾಡಿ, ನಂ.1 ಪಟ್ಟಕ್ಕೇರಿದರು. 331‌ ಸಿಕ್ಸರ್‌ ಸಿಡಿಸಿರುವ ವೆಸ್ಟ್‌ ಇಂಡಿಸ್‌ನ ಕ್ರಿಸ್‌ ಗೇಲ್‌ 3ನೇ ಸಾಲಿನಲ್ಲಿದ್ದಾರೆ. ಇದನ್ನೂ ಓದಿ: ಭಾರತದ 4 ನಗರಗಳಿಗೆ ಫುಟ್ಬಾಲ್‌ ಸ್ಟಾರ್‌ ಮೆಸ್ಸಿ ಭೇಟಿ – ಮೋದಿ ಜೊತೆ ಮಾತುಕತೆ ಸಾಧ್ಯತೆ

ಟಾಪ್‌-5 ODI ಸಿಕ್ಸರ್‌ ವೀರರು
ರೋಹಿತ್‌ ಶರ್ಮಾ – 352 ಸಿಕ್ಸರ್‌
ಶಾಹಿದ್‌ ಅಫ್ರಿದಿ – 351 ಸಿಕ್ಸರ್‌
ಕ್ರಿಸ್‌ ಗೇಲ್‌ – 331 ಸಿಕ್ಸರ್‌
ಸನತ್‌ ಜಯಸೂರ್ಯ – 270 ಸಿಕ್ಸರ್‌
ಎಂ.ಎಸ್‌ ಧೋನಿ – 229 ಸಿಕ್ಸರ್‌

ಸದ್ಯ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಕೆ.ಎಲ್‌ ರಾಹುಲ್‌ ನಾಯಕತ್ವದ ಟೀಂ ಇಂಡಿಯಾ 23.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದೆ. ಇದನ್ನೂ ಓದಿ: WPL 2026 Auction – 3 ಕೋಟಿಗೆ ದೀಪ್ತಿ ಶರ್ಮಾ ಸೇಲ್‌, ಯಾರ‍್ಯಾರಿಗೆ ಎಷ್ಟು ಲಕ್ಷ?

Share This Article