World Cup 2023: 18,000 ರನ್‌ ಪೂರೈಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಹಿಟ್‌ಮ್ಯಾನ್‌

Public TV
2 Min Read

ಲಕ್ನೋ: ಟೀಂ ಇಂಡಿಯಾ ಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ನುಚ್ಚುನೂರು ಮಾಡುತ್ತಲೇ ಇದ್ದಾರೆ. ಹಾಗೆಯೇ ಭಾನುವಾರ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ರೋಹಿತ್‌ ಶರ್ಮಾ (Rohit Sharma) ವಿಶೇಷ ಸಾಧನೆ ಮಾಡಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಜವಾಬ್ದಾರಿ ಅರ್ಧಶತಕ ಸಿಡಿಸುವ ಜೊತೆಗೆ 18,000 ಅಂತಾರಾಷ್ಟ್ರೀಯ ರನ್‌ ಪೂರೈಸಿ, ಸಚಿನ್‌ ತೆಂಡೂಲ್ಕರ್‌ (Sachin Tendulkar), ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌ ಹಾಗೂ ಸೌರವ್‌ ಗಂಗೂಲಿ ಅವರಿದ್ದ ಎಲೈಟ್‌ ಪಟ್ಟಿ ಸೇರಿದ್ದಾರೆ. ಇದರೊಂದಿಗೆ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 18 ಸಾವಿರ ರನ್‌ ಪೂರೈಸಿದ ಹಾಗೂ ಭಾರತದ ಪರ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್‌ ಸಹ ಎನಿಸಿಕೊಂಡಿದ್ದಾರೆ.‌ ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು – ಕಾರಣವೇನು ಗೊತ್ತಾ?

ರೋಹಿತ್‌ ಶರ್ಮಾ ಈವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 3,677 ರನ್‌, ಟಿ20 ಕ್ರಿಕೆಟ್‌ನಲ್ಲಿ 3,853 ರನ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 10,470 ರನ್‌ ಪೂರೈಸಿದ್ದಾರೆ. ಇದರಲ್ಲಿ 45 ಶತಕಗಳು ಹಾಗೂ 98 ಅರ್ಧ ಶತಕಗಳೂ ಸೇರಿವೆ. ವಿರಾಟ್‌ ಕೊಹ್ಲಿ (Virat Kohli) 382 ಇನ್ನಿಂಗ್ಸ್‌ಗಳಲ್ಲಿ, ಸಚಿನ್‌ 412 ಇನ್ನಿಂಗ್ಸ್‌ಗಳಲ್ಲಿ, ರಾಹುಲ್‌ ದ್ರಾವಿಡ್‌ 436 ಇನ್ನಿಂಗ್ಸ್‌ಗಳಲ್ಲಿ, ಸೌರವ್‌ ಗಂಗೂಲಿ 470 ಇನ್ನಿಂಗ್ಸ್‌ಗಳಲ್ಲಿ 18 ಸಾವಿರ ರನ್‌ ಪೂರೈಸಿದ್ದರು. ರೋಹಿತ್‌ ಶರ್ಮಾ 478 ಇನ್ನಿಂಗ್ಸ್‌ಗಳಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

ಇದರೊಂದಿಗೆ ಟೀಂ ಇಂಡಿಯಾ (Team India) ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ 5ನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. 34,357 ರನ್‌ ಗಳಿಸಿರುವ ಸಚಿನ್‌ ತೆಂಡೂಲ್ಕರ್‌ ಮೊದಲ ಸ್ಥಾನದಲ್ಲಿದ್ದರೆ, 26,121 ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ 2ನೇ ಸ್ಥಾನದಲ್ಲಿ, 24,064 ರನ್‌ ಗಳಿಸಿರುವ ರಾಹುಲ್‌ ದ್ರಾವಿಡ್‌ 3ನೇ ಸ್ಥಾನದಲ್ಲಿ 18,433 ರನ್‌ ಗಳಿಸಿರುವ ಸೌರವ್‌ ಗಂಗೂಲಿ 4ನೇ ಸ್ಥಾನದಲ್ಲಿದ್ದರೆ, 18,001 ರನ್‌ ಪೂರೈಸಿರುವ ಹಿಟ್‌ಮ್ಯಾನ್‌ ರೋಹಿತ್‌ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್