ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?

0 Min Read

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಇದೇ ಮಾರ್ಚ್ 19 ರಂದು ತೆರೆಗೆ ಬರಲು ಸಜ್ಜಾಗಿತ್ತು. ಆದ್ರೆ ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿರುವ ಚಿತ್ರತಂಡ ಮಾರ್ಚ್‌ 19 ರಂದು ಸಿನಿಮಾ ರಿಲೀಸ್‌ ಮಾಡುತ್ತಿಲ್ಲ ಎಂದು ಹೇಳಿದೆ.

ಹೌದು. ಸಿನಿಮಾ ತಂಡ ಶಾಕಿಂಗ್ ಅಪ್​​ಡೇಟ್ ಕೊಟ್ಟಿದ್ದು, ಮಾರ್ಚ್‌ 19 ರಂದು ರಿಲೀಸ್‌ ಆಗಬೇಕಿದ್ದ ಸಿನಿಮಾ ದಿನಾಂಕವನ್ನ ಜೂನ್‌ 4 ಕ್ಕೆ ಮುಂದೂಡಿದೆ. ಇದು ಯಶ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ: ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ

ಟಾಕ್ಸಿಕ್‌ ಸಿನಿಮಾ ಕೆಲಗಳು ಭರದಿಂದಲೇ ಸಾಗುತ್ತಿವೆ. ಮಾರ್ಚ್‌ 8 ರಂದು ಚಿತ್ರದ ಟ್ರೈಲರ್‌ ಕೂಡ ರಿಲೀಸ್‌ ಆಗಬೇಕಿತ್ತು. ಅದಕ್ಕೆ ಪೂರಕ ಸಿದ್ಧತೆಯನ್ನೂ ಚಿತ್ರತಂಡ ಮಾಡಿಕೊಂಡಿತ್ತು. ಆದ್ರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ನಿರ್ಮಾಣ ಆಗಿದೆ. ಈ ಬಿಕ್ಕಟ್ಟು ಸದ್ಯಕ್ಕಂತೂ ಪರಿಹಾರ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಅಬುಧಾಬಿ ಮೊದಲಾದ ಕಡೆಗಳಲ್ಲಿ ದಾಳಿ ಆಗುತ್ತಿದೆ. ಈ ಕಾರಣವನ್ನ ನೀಡಿ ಟಾಕ್ಸಿಕ್ ಚಿತ್ರತಂಡ ರಿಲೀಸ್‌ ದಿನಾಂಕವನ್ನ ಮುಂದೂಡಿದೆ.

ಟಾಕ್ಸಿಕ್‌ ಸಿನಿಮಾ ಜಾಗತಿಕ ಪ್ರೇಕ್ಷಕರನ್ನ ದೃಷ್ಟಿಯಲ್ಲಿಟ್ಟಿಕೊಂಡು ನಿರ್ಮಿಸಿದ ಚಿತ್ರ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಸ್ವದೇಶ ಮತ್ತು ವಿಶ್ವದಾದ್ಯಂತ ವೀಕ್ಷಕರೊಂದಿಗೆ ಸಂಪರ್ಕ ಸಾಧಿಸುವ ದೃಢ ನಿಶ್ಚಯದೊಂದಿಗೆ ಸಿನಿಮಾ ನಿರ್ಮಿಸಲಾಗಿದೆ. ವರ್ಷಗಳ ಅವಿರತ ಶ್ರಮದ ಬಳಿಕ ಮಾ.19 ರಂದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದೆವು. ಆದ್ರೆ ಕಾರಣಾಂತರಗಳಿಂದ ಚಿತ್ರವನ್ನ ಮುಂದೂಡಲಾಗುತ್ತಿದೆ ಎಂದು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ

ಗಲ್ಫ್‌ ರಾಷ್ಟ್ರಗಳಲ್ಲಿ ‘ಧುರಂಧರ್ 2’ ರಿಲೀಸ್ ಆಗುತ್ತಿಲ್ಲ. ಹೀಗಾಗಿ, ಈ ರಾಷ್ಟ್ರವನ್ನು ದೊಡ್ಡ ಮಾರುಕಟ್ಟೆ ಮಾಡಿಕೊಳ್ಳಬೇಕು ಎಂಬುದು ‘ಟಾಕ್ಸಿಕ್’ ಸಿನಿಮಾ ತಂಡದ ಪ್ಲ್ಯಾನ್ ಆಗಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ. ಇದನ್ನು ತಂಡ ಗಮನದಲ್ಲಿ ಇಟ್ಟುಕೊಂಡಿದೆ. ನಮ್ಮ ಪಾಲುದಾರರು ಮತ್ತು ಪ್ರೇಕ್ಷಕರನ್ನ ಗಮನದಲ್ಲಿಟ್ಟುಕೊಂಡು ರಿಲೀಸ್‌ ದಿನಾಂಕ ಮುಂದೂಡುವುದು ಅನಿವಾರ್ಯವಾಗಿದೆ. ಮಾರ್ಚ್‌ 19 ರಂದು‌ ತೆರೆಗೆ ಬರಬೇಕಿದ್ದ ಸಿನಿಮಾ ಜೂನ್‌ 4 ರಂದು, ಕನ್ನಡ, ಇಂಗ್ಲಿಷ್‌ ಮತ್ತು ಭಾರತೀಯ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ʻಟಾಕ್ಸಿಕ್ʼ ಸಿನಿಮಾವನ್ನ ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಯಶ್ ಕೂಡ ನಿರ್ಮಾಪಕರಾಗಿದ್ದಾರೆ. ಗೀತು ಮೋಹನ್ ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ

Share This Article