ಕೆಜಿಎಫ್-2 ಸಿನಿಮಾದ ಪೂರ್ತಿ ಕ್ರೆಡಿಟ್ ನಮ್ಮ ಕನ್ನಡ ಇಂಡಸ್ಟ್ರಿಗೆ ಹೋಗಬೇಕು: ರಾಕಿಬಾಯ್

Public TV
3 Min Read

–  ಪ್ರಶಾಂತ್ ನೀಲ್‌ ಅವರಿಂದ ಕೆಜಿಎಫ್ ಆಗಿದ್ದು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಟ್ರೈಲರ್ ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿರುವ ಭಾರತ ಮೊದಲ ಸಿನಿಮಾ ಇದು. ಐದು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿದ್ದು, ರಾಕಿ ಫ್ಯಾನ್ಸ್ ಫುಲ್‌ ಖುಷ್‌ ಆಗಿದ್ದಾರೆ. ಲಾಂಚ್ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕಿಬಾಯ್ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

ಟ್ರೈಲರ್ ಲಾಂಚ್ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ನಮ್ಮೂರಿಗೆ ಸ್ವಾಗತ. ನಾನು ನನ್ನ ಜೀವನದಲ್ಲಿ ಯಾವತ್ತು ನರ್ವಸ್ ಆಗಿಲ್ಲ. ಆದರೆ ಇವತ್ತು ಯಾವ ರೀತಿ ಫೀಲಿಂಗ್ ಆಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಭಾವನೆಯನ್ನು ಯಾವ ರೀತಿ ಹೇಳಿಕೊಳ್ಳಬೇಕು ಅಂತ ಗೊತ್ತಾಗುತ್ತಿಲ್ಲ. ವಿ ಮಿಸ್ ಯೂ ಅಪ್ಪು ಸರ್ ಎಂದು ತಮ್ಮ ಮಾತನ್ನು ಮುಂದುವರೆದಿಸಿದರು.

ಪುನೀತ್ ರಾಜ್‍ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾದಿಂದಲ್ಲೇ ಹೊಂಬಾಳೆ ಫಿಲ್ಮ್ ಜರ್ನಿ ಪ್ರಾರಂಭವಾಗಿತ್ತು. ಈ ದಿನ ಬರುತ್ತೆ ಎಂದು ನಾವು ತಿಳಿದುಕೊಂಡಿರಲಿಲ್ಲ. ಶಿವಣ್ಣ ನಮ್ಮ ಅಣ್ಣ. ಅವರನ್ನು ಎಲ್ಲರೂ ಅಳಿಸುವುದನ್ನು ನನ್ನ ಕೈಯಲ್ಲಿ ನೋಡೋಕೆ ಆಗುತ್ತಿಲ್ಲ. ಇಲ್ಲಿವರೆಗೂ ನಾನು ಅಪ್ಪು ಅವರ ಬಗ್ಗೆ ಮಾತನಾಡಿಲ್ಲ. ಆದರೆ ಇಂದು ನಾನು ಅವರ ಬಗ್ಗೆ ಮಾತನಾಡಲು ಇಷ್ಟ ಪಡುತ್ತೇನೆ. ಅವರು ನಮ್ಮೆಲ್ಲರ ಜೊತೆಯಲ್ಲೇ ಇರುತ್ತಾರೆ. ಅವರು ಎಲ್ಲರ ನಡುವೆ ಜೀವಂತವಾಗಿ ಇರುತ್ತಾರೆ ಎಂದು ನೆನೆದರು. ಇದನ್ನೂ ಓದಿ: ರಾಧಿಕಾ ಬಂದ ಮೇಲೆ ಇನ್ನೂ ಯಶ್ ಅದೃಷ್ಟ ಹೆಚ್ಚಾಯಿತು: ಶಿವಣ್ಣ

ಅಪ್ಪು ಅವರು ಆದರ್ಶ ನಮ್ಮ ಜೊತೆ ಇರುತ್ತೆ. ಅವರು ಬದುಕಿದ್ದಾಗಲೂ ನಾನು ಅವರ ಬಗ್ಗೆ ಹೇಳಿದ್ದೆ. ಅವರ ಜೊತೆ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಆ ಖುಷಿ ನನಗೆ ಇದೆ ಎಂದು ಅಪ್ಪು ಬಗ್ಗೆ ಭಾವುಕರಾಗಿ ಮಾತನಾಡಿದರು.

ಶಿವಣ್ಣನ ಬಗ್ಗೆ ಮಾತನಾಡಿದ ಅವರು, ಥ್ಯಾಂಕ್ಸ್ ಶಿವಣ್ಣ. ನಿಮ್ಮ ರೀತಿ ಕನ್ನಡ ಸಿನಿಮಾಗಳನ್ನು ಯಾರು ಪ್ರೋತ್ಸಾಹ ಕೊಡುವುದಿಲ್ಲ. ನಮ್ಮ ಕನ್ನಡ ಸಿನಿಮಾಗಳ ಪ್ರತಿ ಹೆಜ್ಜೆಯಲ್ಲಿಯೂ ನೀವು ಜೊತೆಗೆ ಇದ್ದೀರಾ. ವಿಜಿ ಸರ್ ನಿಮ್ಮನ್ನ ಕಾರ್ಯಕ್ರಮಕ್ಕೆ ಕರೆದಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಒಂದು ವೇಳೆ ಗೊತ್ತಿದ್ರೆ ನಾನು ಬರುತ್ತಿದ್ದೆ. ವಿಜಿ ಅವರು ಶಿವಣ್ಣನನ್ನು ಕರೆಯಲು ಹೋದಾಗ ಫೋನ್ ಮಾಡಿದ್ರೆ ಬರುತ್ತಿದ್ದೆ ಎಂದಿದ್ದಾರೆ. ಅದು ನಿಮ್ಮ ದೊಡ್ಡತನ. ನೀವು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಜೊತೆಗೆ ಇರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಶಿವಣ್ಣನನ್ನು ಹೊಗಳಿದರು.

ನಾನು ನನ್ನ ಇಂಡಸ್ಟ್ರಿಯನ್ನು ತುಂಬಾ ಅಚ್ಚುಕೊಂಡಿದ್ದೇನೆ. ನಾನು ನಮ್ಮ ಸಿನಿಮಾ ಮತ್ತು ನಮ್ಮ ಇಂಡಸ್ಟ್ರಿಗೆ ಪ್ರಶಂಸೆ ಹೋಗಬೇಕು ಎಂದು ನಾನು ಇಷ್ಟ ಪಡುತ್ತೇನೆ. ನನಗೆ ಇವರಲ್ಲಿ ಕ್ರೆಡಿಟ್ ಬೇಡ. ಇದು ನಮ್ಮ ಕನ್ನಡ ಜನರ ಕನಸು ಆಗಿತ್ತು. ಆದರೆ ಒಂದೇ ಸಮಯದಲ್ಲಿ ಕನ್ನಡದ ಲೆಜೆಂಡ್‍ಗಳನ್ನು ನೋಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಬೇರೆ ಭಾಷೆ ತಾರೆಯರು ನಮ್ಮ ಇಂಡಸ್ಟ್ರಿ ಬಗ್ಗೆ ಹೆಚ್ಚು ಪ್ರೀತಿ ತೋರಿಸಿ ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗುತ್ತಿದೆ. ಕೆಜಿಎಫ್ 1 ಮುಗಿನ ಮೇಲೆ ನಾವು ನಮ್ಮ ಇಂಡಸ್ಟ್ರಿಗೋಸ್ಕರ ಏನಾದರೂ ಮಾಡಿದ್ದೇವೆ ಎಂದು ಸಂತೋಷವಾಗುತ್ತಿದೆ ಎಂದರು.

ನಾನು ಈ ಬಗ್ಗೆ ಹೊಂಬಾಳೆ ವಿಜಯ್ ಕಿರಗಂದೂರು ಅವರ ಜೊತೆ ಕೆಜಿಎಫ್ ಬಗ್ಗೆ ಮಾತನಾಡುತ್ತಿರಬೇಕಾದರೆ ಎಲ್ಲರೂ ನಮ್ಮನ್ನು ಹುಚ್ಚ ಎಂದು ತಿಳಿದಿದ್ದರು. ಎಲ್ಲ ಹೀರೋಗಳಿಗೂ ಹೆಚ್ಚು ದೊಡ್ಡ ಸ್ಥಾನದಲ್ಲಿ ಇರಬೇಕು ಎಂದು ಇಷ್ಟವಿರುತ್ತೆ. ಅದೇ ರೀತಿ ನಾನು ಮಾತನಾಡುತ್ತಿದ್ದೆ ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ವಿಜಿ ಅವರು ನನ್ನ ಉದ್ದೇಶವನ್ನು ಸರಿಯಾಗಿ ತಿಳಿದುಕೊಂಡು ನನಗೆ ಬೆಂಬಲವಾಗಿ ನಿಂತರು. ಯಾರು ಊಹಿಸಲು ಸಾಧ್ಯವಾಗದನ್ನು ಅವರು ಮಾಡಿದ್ದಾರೆ. ಇದೇ ರೀತಿ ಕೆಜಿಎಫ್ ಆಯ್ತು. ಇದಕ್ಕೆ ಮುಖ್ಯ ಕಾರಣ ಪ್ರಶಾಂತ್ ನೀಲ್ ಎಂದು ವಿವರಿಸಿದರು.

ಎಲ್ಲರೂ ನನಗೆ ಈ ಕ್ರೆಡಿಟ್ ಕೊಡುತ್ತಾರೆ. ಆದರೆ ನಿಜವಾಗಿ ಈ ಕ್ರೆಡಿಟ್ ಹೋಗಬೇಕಾಗಿರುವುದು ಪ್ರಶಾಂತ್ ಅವರಿಗೆ. ನನಗೆ ಕೆಜಿಎಫ್ ಸಿನಿಮಾದ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಟ್ರೈಲರ್ ನೋಡಿ ತುಂಬಾ ಸಂತೋಷವಾಗುತ್ತಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ಇದ್ದಾರೆ. ಅವರನ್ನು ಪ್ರಶಾಂತ್ ಅವರು ಪ್ರೊಫೆಶನ್ ಕಲಾವಿದರ ರೀತಿ ಸಿನಿಮಾ ಮಾಡಿಸಿದ್ದಾರೆ. ಇದು ಅವರ ಸಾಮರ್ಥ್ಯ ಎಂದು ಹೊಗಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಿದರು. ಶ್ರೀನಿಧಿ ಅವರು ಈ ಸಿನಿಮಾಗಾಗಿ 6 ವರ್ಷ ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *