ಯಾವ ಮಗು ಬೇಕು ಎಂಬುದನ್ನು ರಿವೀಲ್ ಮಾಡಿದ್ರು ರಾಕಿಂಗ್ ಸ್ಟಾರ್!

Public TV
2 Min Read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‍ಗೆ ಜನಿಸಲಿರುವ ಮಗುವಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯೇ ಆಗುತ್ತಿದೆ. ಅಭಿಮಾನಿಗಳಂತೂ ಮರಿ ಬಾಸ್ ಎಂದೇ ನಾಮಕರಣ ಮಾಡಿಬಿಟ್ಟಿದ್ದಾರೆ. ಆದರೆ ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ನನಗೆ ಹೆಣ್ಣು ಮಗು ಬೇಕು ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ಈ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಜಾಗರೂಕತೆಯಿಂದ ಇರುತ್ತಾರೆ. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾಗಿರುವಾಗ ನೂರಾರು ಕನಸುಗಳನ್ನ ಕಾಣುತ್ತಾರೆ. ಆ ಎಲ್ಲಾ ಬಯಕೆಗಳನ್ನ ಈಡೇರಿಸುವುದು ಗಂಡನ ಕರ್ತವ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಾಲು ನೋವು, ಬೆನ್ನು ನೋವು ಬರುತ್ತವೆ. ಅವರಿಗೆ ನೋವು ಬಂದಾಗ ಕಾಲು ಒತ್ತಬೇಕು, ಇವೆಲ್ಲವನ್ನು ಗಂಡನಾಗಿ ಮಾಡಬೇಕು ಅದು ಅವನ ಜವಾಬ್ದಾರಿ ಜೊತೆಗೆ ಖುಷಿಯಾಗಿ ಮಾಡಬೇಕು. ಈ ವೇಳೆ ನನಗೆ ಹೆಣ್ಣು ಮಗು ಬೇಕು. ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಆ.12 ಮುಖ್ಯವಾದ ದಿನ – ರಾಧಿಕಾ ಅವರಿಂದ ಮೊದಲ ಗರ್ಭಿಣಿ ಫೋಟೋ ಶೇರ್

ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿಕೊಳ್ಳಬೇಕು ಅನ್ನೋದು ರಾಧಿಕಾ ಅವರ ಮಹದಾಸೆಯಾಗಿತ್ತು. ಆದ್ದರಿಂದ ಇತ್ತೀಚೆಗಷ್ಟೆ ಕೆಜಿಎಫ್ ಶೂಟಿಂಗ್ ಮುಗಿಯುತ್ತಿದ್ದಂತೆ ಗಡ್ಡವನ್ನು ಕತ್ತರಿಸಿಕೊಂಡಿದ್ದಾರೆ. ರಾಧಿಕಾ ಅವರಿಗೆ ಏಳು ತಿಂಗಳು ತುಂಬಿದ ಮೇಲೆ ಸೀಮಂತ ಕಾರ್ಯಕ್ರಮವನ್ನೂ ಮಾಡಲಿದ್ದಾರೆ.

ಇತ್ತೀಚೆಗೆ ಯಶ್ ಮತ್ತು ರಾಧಿಕಾ `ಮೈ ನೇಮ್ ಇಸ್ ಕಿರಾತಕ’ ಸಿನಿಮಾ ಶೂಟಿಂಗ್ ಗಾಗಿ ದುಬೈಗೆ ಹೋಗಿದ್ದರು. ರಾಧಿಕಾ ಅವರು ದುಬೈಗೆ ಹೋಗಬೇಕು ಎಂದ ತಕ್ಷಣ ಯಶ್ ಫ್ಲೈಟ್ ಟಿಕೆಟ್‍ನ ಬುಕ್ ಮಾಡಿದ್ದರು. ಬಳಿಕ ಡಾಕ್ಟರ್ ಪರ್ಮಿಷನ್ ಕೊಟ್ಟ ತಕ್ಷಣ ದುಬೈ ಹೋಗಿ ಅಲ್ಲಿನ ಸುಂದರ ತಾಣಗಳನ್ನು ನೋಡಿ ಬಂದಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಕಾಲ ಜೊತೆಗಿದ್ದಿದ್ದನ್ನು ಕಳೆದುಕೊಂಡ ಯಶ್- ವಿಡಿಯೋ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *