ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

Public TV
2 Min Read

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಗುರುವಾರ ರಾಷ್ಟ್ರಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್-2 ಸಿನಿಮಾ ಅಬ್ಬರಿಸುತ್ತಿದೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರುವ ಯಶ್ ಇದೀಗಾ ಇತರೆ ರಾಜ್ಯಗಳ ಸ್ಟಾರ್ ನಟರ ಸಿನಿಮಾಗಳಿಗೂ ಸೆಡ್ಡು ಹೊಡೆದಿದ್ದಾರೆ.

ಹೌದು, ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ಬಿಡುಗಡೆಯಾಗಿತ್ತು. ಇದೀಗ ಬೀಸ್ಟ್ ಸಿನಿಮಾ ಕೆಜಿಎಫ್-2 ಸಿನಿಮಾದ ಮುಂದೆ ಮಕ್ಕಾಡೆಯಾಗಿ ಮಲಗಿದೆ. ಹೆಚ್ಚಾಗಿ ತಮಿಳಿಗರೇ ಇರುವ ಮಲೇಷ್ಯಾದಲ್ಲಿ ಬೀಸ್ಟ್ ಸಿನಿಮಾವನ್ನು ಬದಿಗೊತ್ತಿ ಕೆಜಿಎಫ್-2 ಟಾಪ್ 1 ಪಟ್ಟವನ್ನು ಅಲಂಕರಿಸಿದೆ. ಇನ್ನೂ ಬೀಸ್ಟ್ ಸಿನಿಮಾ 3ನೇ ಸ್ಥಾನಕ್ಕೆ ಇಳಿದಿದೆ. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿರುವ ಕೆಜಿಎಫ್-2 ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಇದೀಗ ತಮಿಳು ನಾಡು ಸೇರಿದಂತೆ ಭಾರತಾದ್ಯಂತ ಈ ಸಿನಿಮಾ ಟಾಪ್-1 ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿದಂತೆ ಬಾಕ್ಸ್ಆಫೀಸ್ ಕಲೆಕ್ಷನ್ ಆಗಿದೆ. ಅಲ್ಲದೇ ಟಿಕೆಟ್ ಕೊರತೆಯಿಂದಾಗಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಕೆಜಿಎಫ್-2 ಸ್ಪೆಷಲ್ ಶೋ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಯಶ್ ತಂದೆ

ಮತ್ತೊಂದೆಡೆ ಕೇರಳದಲ್ಲಿ ಮೊದಲ ದಿನವೇ ಇದೇ ಮೊದಲ ಬಾರಿಗೆ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಕೆಜಿಎಫ್-2 ಆಗಿದ್ದು, ಮೊದಲ ದಿನವೇ ಗಲ್ಲಾ ಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದೆ. ಒಟ್ಟಾರೆ ರಾಕಿ ಭಾಯ್ ಅಭಿನಯಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಫುಲ್ ಮಾಕ್ರ್ಸ್ ಕೊಟ್ಟಿದ್ದು, ಸಿನಿಮಾಕ್ಕೆ ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *