ಹಂಪಿ ಉತ್ಸವದಲ್ಲಿ ರಾಕಿ ಬಾಯ್ ಹವಾ

Public TV
2 Min Read

– ಮೈಸೂರಿನ ದಸರಾ ರೀತಿಯಲ್ಲಿ ಹಂಪಿ ಉತ್ಸವ ಆಚರಣೆ: ಸಚಿವ ಸಿಟಿ ರವಿ

ಬಳ್ಳಾರಿ: ವಿಜಯನಗರ ಗತ ವೈಭವವನ್ನು ಸಾರುವ ಹಂಪಿ ಉತ್ಸವಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. ಸಿಎಂ ಅವರ ಕಾರ್ಯಕ್ರಮ ಮುಗಿದ ಬಳಿಕ ಹಂಪಿಯ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಯಶ್ ಆಗಮಿಸಿದ್ದರು.

ವೇದಿಕೆ ಆಗಮಿಸಿ ಅಭಿಮಾನಿಗಳತ್ತಾ ಕೈ ಬೀಸಿ ಹೊಸ ವರ್ಷದ ಶುಭಾಶಯ ಕೋರಿದ ಯಶ್, ಇತಿಹಾಸ ಹಾಗೆ ಸೃಷ್ಠಿ ಆಗಲ್ಲಾ. ಈ ಮಣ್ಣಿನಲ್ಲಿ ಒಂದು ಪವರ್ ಇದೆ. ಅದಕ್ಕೆ ದೇಶದ ಅತ್ಯಂತ ಉನ್ನತ ಇತಿಹಾಸ ನಿರ್ಮಾಣ ಆಗಿದೆ. ಆದರೆ ಈ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಯಶ್ ಅಭಿಮಾನಿಗಳು ಯಶ್ ವೇದಿಕೆ ಬರಲು ಬಳಸಿದ ಕಾರ್ ಮುಂದೆ ನಿಂತು ವಿವಿಧ ಬಂಗಿಯಲ್ಲಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡರು. ಆದರೆ ಅಭಿಮಾನಿಗಳು ಯಶ್ ಬಳಸಿದ್ದ ಕಾರ್ ಅವರದೇ ಎಂದು ತಿಳಿದಿದ್ರು, ಆದರೆ ಅದು ಯಶ್ ಅವರ ಕಾರ್ ಆಗಿರಲಿಲ್ಲ, ಬದಲಾಗಿ ಅದು ಜಿಲ್ಲಾಡಳಿತ ಅವರ ಏರ್ಪಡಿಸಿದ್ದ ಕಾರ್ ಆಗಿತ್ತು.

ಹಂಪಿ ಉತ್ಸವ 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು, ಇನ್ನು ಮುಂದೆ ಪ್ರತಿವರ್ಷ ನಿಗದಿತ ದಿನಾಂಕಗಳಂದು ಹಂಪಿ ಉತ್ಸವವನ್ನು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ಯಾಲೆಂಡರ್ ನಲ್ಲಿ ಅಳವಡಿಸಿ ಉತ್ಸವದ ಅನಿಶ್ಚಿತತೆ ನಿವಾರಿಸಲಾಗುವುದು ಎಂದರು.

ಮೈಸೂರಿನ ದಸರಾ ಹೇಗೆ ಆಚರಣೆ ಮಾಡಲಾಗುವುದೋ, ಅದೇ ರೀತಿಯಲ್ಲಿ ಹಂಪಿ ಉತ್ಸವ ಆಚರಣೆ ಮಾಡಲಾಗುವುದು. ಭಾರತದ ಪರಂಪರೆಯ ಅವನತಿ ಮತ್ತು ಉನ್ನತಿಯ ಚರಿತ್ರೆಯನ್ನು ಹಂಪಿಯ ಕಲ್ಲು ಕಲ್ಲುಗಳು ಹೇಳುತ್ತವೆ. ನಮ್ಮ ಗತ ಇತಿಹಾಸ, ಪರಂಪರೆಯನ್ನು ಯಾವ ಶಕ್ತಿಗಳು ನಾಶಮಾಡಿದ್ದವೋ, ಅದೇ ಶಕ್ತಿಗಳು ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಅಖಂಡತೆಗೆ ಧಕ್ಕೆ ಉಂಟು ಮಾಡುತ್ತಿವೆ. ಆ ಕಾಲದಲ್ಲೂ ನಮ್ಮನ್ನು ಬಾದಿಸಿ ಈಗಲೂ ನಮ್ಮ ಜೊತೆಯಲ್ಲಿ ಇದ್ದು ನಮ್ಮ ಅಖಂಡತೆಗೆ ಧಕ್ಕೆ ತಂದಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು. ಇಂತಹ ಉತ್ಸವಗಳು ಕೇವಲ ಮನರಂಜನೆಯ ಆಚರಣೆಗಳಾಗಬಾರದು, ಪರಂಪರೆಯ ಚಿಂತನ ಮಂಥನಗಳಾಗಬೇಕು ಎಂದರು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *