ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ: ನಿಖಿಲ್‍ಗೆ ಫ್ಯಾನ್ಸ್ ತಿರುಗೇಟು

Public TV
1 Min Read

ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆ ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಟೀಕೆ ಮಾಡ್ತಾರೆ ಎಂದು ಮಂಡ್ಯ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕೊಪ್ಪಳದಲ್ಲಿ ಯಶ್ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಹೇಳಿಕೆಗೆ ಯಶ್ ಅಭಿಮಾನಿಗಳು ತೀವ್ರವಾಗಿ ಆಕ್ಷೇಪ ಮಾಡುತ್ತಿದ್ದಾರೆ.

ಯಶ್ ಏನು ಮಾಡಿದ್ದಾನೆ ಎಂದು ಕೊಪ್ಪಳಕ್ಕೆ ಬಂದು ನೋಡಿ. ಯಶ್ ಸ್ವತಃ ತಮ್ಮ ಹಣದಲ್ಲಿ ತಲ್ಲೂರು ಕೆರೆ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಯಶ್ ಕೆಲಸದಿಂದ ತಲ್ಲೂರು ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಯಶ್ 4 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಅಭಿವೃದ್ಧಿಯಾಗಿದೆ. ಅಲ್ಲದೆ ಯಶೋಮಾರ್ಗದ ಮೂಲಕ ಯಶ್ ಕೆರೆ ಹೂಳೆತ್ತಿದ್ದಾರೆ. ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ ಎಂದು ಅಭಿಮಾನಿಗಳು ನಿಖಿಲ್‍ಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಯಶ್ ಅಭಿಮಾನಿಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ನಿಖಿಲ್ ಹೇಳಿದ್ದೇನು?
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟಿದ್ದರು.

ಪಾಪ ಎಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ನೀವು ನಮ್ಮ ತಂದೆ ತಾಯಂದಿರು. ನನ್ನ ತಂದೆ ಹಾಗೂ ತಾತನಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಹಾಗೆಯೇ ನನಗೂ ಕೊಡುತ್ತೀರಿ ಅಂತ ಬಂದಿದ್ದೀನಿ ಎಂದು ಪ್ರಚಾರ ಮುಂದುವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *