ಮೈಸೂರು | ಪೆಟ್ರೋಲ್ ಬಂಕ್‌ಗೆ ನುಗ್ಗಿ ದರೋಡೆ – ಎದೆ ಝಲ್‌ ಎನಿಸುತ್ತೆ ವಿಡಿಯೋ

1 Min Read

ಮೈಸೂರು: ಮಾರಕಾಸ್ತ್ರ ಹಿಡಿದು ಐವರ ಗ್ಯಾಂಗ್ ಪೆಟ್ರೋಲ್ ಬಂಕ್‌ಗೆ (Petrol Bunk) ನುಗ್ಗಿ ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆಯ ಸ್ವಾಮಿ ಸರ್ವಿಸ್ ಸ್ಟೇಷನ್‌ನಲ್ಲಿ ನಡೆದಿದೆ.

ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ 15,300 ರೂಪಾಯಿ ದರೋಡೆ ಮಾಡಿದ್ದಾರೆ. ಫೆಬ್ರವರಿ 12 ರ ರಾತ್ರಿ ಸುಮಾರು 10:30 ಗಂಟೆ ಸುಮಾರಿಗೆ ಈ ದರೋಡೆ ನಡೆದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೊಂದು ʻಲಕ್ಕಿ ಭಾಸ್ಕರ್ʼ ಸಿನಿ ಸ್ಟೋರಿ – ಬ್ಯಾಂಕ್‌ನಿಂದ 2.78 ಕೆಜಿ ಚಿನ್ನಾಭರಣ ಕಳವು

ದರೋಡೆ (Robbery) ಹಾಗೂ ಹಲ್ಲೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಮೊದಲು ಪೆಟ್ರೋಲ್ ಹಾಕಿಸುತ್ತಿದ್ದ ಗ್ಯಾಂಗ್, ನಂತರ ಕಚೇರಿ ಒಳಗೆ ನುಗ್ಗಿ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹಣ ಕಸಿದುಕೊಂಡು ಹೋಗಿದ್ದಾರೆ.

ಪ್ರಕರಣ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: Viral Video | ವಿಷ್ಣುವರ್ಧನ್‌ಗೆ ಪುಂಡರಿಂದ ಅಪಮಾನ – ವಿದ್ಯಾರ್ಥಿಗಳ ತಪ್ಪಿಗೆ ಪೋಷಕರಿಂದ ಕ್ಷಮೆಯಾಚನೆ

Share This Article