ಬಿಹಾರದ ಆಭರಣ ಮಳಿಗೆಯಲ್ಲಿ ಫಿಲ್ಮಿಸ್ಟೈಲ್‌ನಲ್ಲಿ ದರೋಡೆ – 8 ನಿಮಿಷದಲ್ಲಿ 25 ಕೋಟಿ ಚಿನ್ನಾಭರಣ ದರೋಡೆ!

Public TV
1 Min Read

– ಗನ್‌ಪಾಯಿಂಟ್‌ನಲ್ಲಿರಿಸಿ ದೋಚಿದ ಗ್ಯಾಂಗ್‌

ಪಾಟ್ನಾ: ಬಿಹಾರದ (Bihar) ಭೋಜ್‌ಪುರ ಜಿಲ್ಲೆಯ ಗೋಪಾಲಿ ಚೌಕ್‌ನಲ್ಲಿ ಫಿಲ್ಮಿಸ್ಟೈಲ್‌ ದರೋಡೆ ನಡೆದಿದೆ. ಏಳು ಮಂದಿಯ ದರೋಡೆಕೋರರ ಗುಂಪೊಂದು ಇಲ್ಲಿ ಆಭರಣ ಮಳಿಗೆಗೆ ನುಗ್ಗಿ 8 ನಿಮಿಒಷಗಳಲ್ಲಿ ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ (Jewellery) ದೋಚಿದೆ.

ಸೋಮವಾರ (ಇಂದು) ಮುಂಜಾನೆ ಬಿಹಾರದ ಅರ್ರಾಹ್‌ನಲ್ಲಿರುವ ತನಿಷ್ಕ್ ಆಭರಣ ಶೋರೂಮ್‌ಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು 25 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಇದನ್ನೂ ಓದಿ: ರಂಜಾನ್ ಟೈಮಲ್ಲೇ ಗುಲ್ಮಾರ್ಗ್‌ ಫ್ಯಾಷನ್ ಶೋ – 24 ಗಂಟೆಗಳಲ್ಲಿ ವರದಿ ನೀಡುವಂತೆ ಒಮರ್ ಅಬ್ದುಲ್ಲಾ ಆದೇಶ

ಆಭರಣ ಮಳಿಗೆಯಲ್ಲಿದ್ದವರನ್ನು ಗನ್‌ಪಾಯಿಂಟ್‌ನಲ್ಲಿ ಬೆದರಿಸಿ ಲೂಟಿ ಮಾಡಿದ್ದಾರೆ. ರಾಬರಿ ವೇಳೆ ಕುಳಿತ ಸ್ಥಾನದಿಂದ ಎದ್ದು ಬಂದ ಮ್ಯಾನೇಜರ್ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದಾರೆ. 8 ನಿಮಿಷದಲ್ಲಿ ಚಿನ್ನಾಭರಣ ಸೇರಿ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಲ್ಲಾ ಮುಗಿದ ಮೇಲೆ ಎಂದಿನಂತೆ ಪೊಲೀಸರು ಎಂಟ್ರಿ ಕೊಟ್ಟು ತನಿಖೆ ನಡೆಸಿದ್ದಾರೆ. ಚೇಸ್ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಈ ಕುರಿತು ಮಾತನಾಡಿರುವ ಶೋರೂಂ ಮ್ಯಾನೇಜರ್ ಕುಮಾರ್ ಮೃತ್ಯುಂಜಯ್, ಕಳ್ಳರು ನಗದು ಜೊತೆಗೆ ಚಿನ್ನದ ಸರಗಳು, ನೆಕ್ಲೇಸ್‌ಗಳು, ಬಳೆ ಮತ್ತು ಕೆಲವು ವಜ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ

Share This Article