ಕತ್ರಿನಾ ಕೈಫ್‌ ಕೆನ್ನೆಯಷ್ಟು ರಸ್ತೆ ನೈಸ್‌ ಆಗಿರಬೇಕು: ರಾಜೇಂದ್ರ ಸಿಂಗ್ ಗುಧಾ

Public TV
1 Min Read

ಜೈಪುರ್: ಕತ್ರಿನಾ ಕೈಫ್ ಅವರ ಕೆನ್ನೆಯಂತೆ ರಸ್ತೆಗಳನ್ನು ನಿರ್ಮಿಸಬೇಕು ಎಂದು ಹೇಳುವ ಮೂಲಕವಾಗಿ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ ಸುದ್ದಿಯಾಗಿದ್ದಾರೆ.

ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ರಾಜ್ಯದ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಅವರ ಕೆನ್ನೆಗೆ ಹೋಲಿಸಿದ್ದಾರೆ. ಈ ಹೇಳಿಕೆಯ ವೀಡಿಯೋ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

ವೈರಲ್ ವೀಡಿಯೋದಲ್ಲಿ ಏನಿದೆ?: ಶಾಸಕ ತಮ್ಮ ವಿಧಾನಸಭಾ ಕ್ಷೇತ್ರವಾದ ಉದಯಪುರವತಿಯಲ್ಲಿ ಜನರೊಂದಿಗೆ ಸಂವಹನ ನಡೆಸುತ್ತದ್ದರು. ತಮ್ಮ ಅಳಲನ್ನು ತೋಡಿಕೊಂಡ ಕೆಲ ಗ್ರಾಮಸ್ಥರು ಈ ಭಾಗದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸಚಿವರು ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಡೆಗೆ ತಿರುಗಿ, ನನ್ನ ಕ್ಷೇತ್ರದಲ್ಲಿ ಕತ್ರಿನಾ ಕೈಫ್ ಕೆನ್ನೆಯಂತೆ ರಸ್ತೆ ಮಾಡಬೇಕು ಎಂದು ತಮಾಷೆಯಾಗಿ ಹೇಳಿದರು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

ರಾಜಕಾರಣಿಗಳು ರಸ್ತೆಗಳನ್ನು ನಟಿಯರ ಕೆನ್ನೆಗೆ ಹೋಲಿಸುವುದು ಹೊಸದೇನಲ್ಲ. 2005 ರಲ್ಲಿ, ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ಸುಗಮಗೊಳಿಸುವುದಾಗಿ ಭರವಸೆ ನೀಡಿದಾಗ ಗದ್ದಲವನ್ನು ಪ್ರಾರಂಭಿಸಿದ್ದರು. ಮಧ್ಯಪ್ರದೇಶದ ಕಾನೂನು ಸಚಿವ ಪಿಸಿ ಶರ್ಮಾ ಅವರು 2019 ರಲ್ಲಿ ರಾಜ್ಯದ ಹೊಂಡಗಳಿಂದ ಕೂಡಿದ ರಸ್ತೆಗಳನ್ನು ಶೀಘ್ರದಲ್ಲೇ ಡ್ರೀಮ್ ಗರ್ಲ್ ಸ್ಟಾರ್‍ನ ಕೆನ್ನೆಗಳಂತೆ ಸುಂದರ ಗೊಳಿಸಲಾಗುವುದು ಎಂದಿದ್ದರು. ಆದರೆ ಇದೀಗ ಕತ್ರಿನಾ ಕೈಪ್ ಕೆನ್ನೆ ಯಂತೆ ರಸ್ತೆ ಮಾಡುವಂತೆ ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

Share This Article
Leave a Comment

Leave a Reply

Your email address will not be published. Required fields are marked *