ದಕ್ಷಿಣ ಕನ್ನಡ ಜಿಲ್ಲೆಯ ಹೊಸ್ಮಠ ಸೇತುವೆ ಕುಸಿತ!

Public TV
1 Min Read

ಮಂಗಳೂರು: ಪ್ರತಿ ಮಳೆಗಾಲದಲ್ಲಿಯೂ ಮುಳುಗಡೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹೊಸ್ಮಠ ಸೇತುವೆ ಬಳಿ ರಸ್ತೆ ಭಾಗಶಃ ಕುಸಿದಿದೆ.

ಉಪ್ಪಿನಂಗಡಿ ಮತ್ತು ಕಡಬದ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆ ಇಂದು ಬೆಳಗ್ಗೆ ಕುಸಿದಿದೆ. ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆ ಕುಸಿದ ಕೂಡಲೇ ಜೆಸಿಬಿಯಿಂದ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ ಪ್ರತೀ ಮಳೆಗಾಲದಲ್ಲಿ ಹಲವು ಬಾರಿ ಮುಳುಗಡೆಯಾಗುತ್ತಿದೆ. ಇದರಿಂದ ರಸ್ತೆ-ಸಂಚಾರ ಹಾಗೂ ಶಾಲಾ ಕಾಲೇಜುಗಳಿಗೆ ಅಡಚಣೆಯಾಗುತ್ತಿದೆ. ಸದ್ಯ ಇದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸೇತುವೆ ಕಡೆಯಿಂದ ನೀರು ಹರಿಯಲು ಬಿಡಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಹಳೆ ಸೇತುವೆ ಕುಸಿದಿದೆ ಅಂತ ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *