– ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಬಿಜೆಪಿಗರ ಮೇಲೆ ಕಾಂಗ್ರೆಸ್ ಮುಖಂಡರ ಗಲಾಟೆ
ಬೆಂಗಳೂರು: ನಗರದಲ್ಲಿ ಸುರಿದ ಮಳೆಯಿಂದ ಕಳಪೆ ಕಾಮಗಾರಿ ಬಯಲಾಗಿದೆ. ಚಾಮರಾಜಪೇಟೆಯಲ್ಲಿ 50 ಮೀಟರ್ ರಸ್ತೆ ಕುಸಿತ ಆಗಿದೆ. ಕಳಪೆ ಕಾಮಗಾರಿ ಅಂದಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ಕೂಡ ಆಗಿದೆ.
ಚಾಮರಾಜಪೇಟೆಯ ನಾಲ್ಕನೇ ಹಂತದ ಆರನೇ ರಸ್ತೆಯಲ್ಲಿ 50 ಮೀಟರ್ ರಸ್ತೆ ಕುಸಿದಿದೆ. ಜಲಮಂಡಳಿ ಪೈಪ್ಲೈನ್ ಅಳವಡಿಕೆಗೆ ಅಗೆದಿದ್ದ ಕಾಲುವೆ ನಿನ್ನೆ ಪೈಪ್ಲೈನ್ ಮುಚ್ಚಿದ್ದಾರೆ. ಸರಿಯಾಗಿ ಮಣ್ಣು ಕಾಂಕ್ರಿಟ್ ಹಾಕಿಲ್ಲ. ಕಳಪೆ ಕೆಲಸದಿಂದ ಕುಸಿದಿದ್ದ ವಾಹನಗಳು ಸಿಲುಕಿವೆ.
ಕಳಪೆ ಕಾಮಗಾರಿ ಆಗಿದೆ ಅಂತಾ ಬಿಜೆಪಿ ಮುಖಂಡ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರು ಕಳಪೆ ಕಾಮಗಾರಿಯನ್ನ ಸಮರ್ಥಿಸಿಕೊಂಡು ಪ್ರಶ್ನೆ ಮಾಡಿದವರ ಮೇಲೆಯೇ ಗಲಾಟೆ ಮಾಡ್ತಾ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಚಿವ ಜಮೀರ್ ಅಹ್ಮದ್ ಸ್ವಂತ ಕ್ಷೇತ್ರಕ್ಕೆ ಬಂದು ಆಗಿರುವ ಸಮಸ್ಯೆಯನ್ನ ನೋಡಬೇಕಿತ್ತು. ಆದರೆ, ತಾವು ಬರದೇ ಕಾರ್ಯಕರ್ತರನ್ನು ಕಳಿಸಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಜೆಸಿಬಿ, ಕ್ರೇನ್ ತಂದು ಸಿಲುಕಿರುವ ವಾಹನಗಳನ್ನ ಹೊರತೆಗೆಯಲಾಗುತ್ತಿದೆ.