ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್‌ ಸವಾರರು ಸಾವು

Public TV
1 Min Read

– ಕಲಬುರಗಿ: ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಬಾಲಕರ ಮೃತ್ಯು

ತುಮಕೂರು: ಕಂಟೇನರ್‌ ಹಾಗೂ ಬೈಕ್‌ ನಡುವಿನ ಭೀಕರ ಅಪಘಾತದಲ್ಲಿ (Accident) ಮೂವರು ಬೈಕ್‌ ಸವಾರರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ದಾಬಸಪೇಟೆಯ ಎಂ.ಇ ಸೋಲಾರ್ ಪ್ಲಾಂಟ್‌ನಲ್ಲಿ ಕೆಲಸ ಮುಗಿಸಿ ಬರುವಾಗ ತುಮಕೂರು (Tumkur) ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ದುರಂತ ನಡೆದಿದೆ. ರಾಜೇಶ್ (25), ಧನಂಜಯ್ (27), ಧನುಷ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಸದ್ಯ ಸ್ಥಳಕ್ಕೆ ಎಎಸ್ಪಿ ನಾಗರಾಜ್, ಡಿವೈಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದಗ ದೌಡಾಯಿಸಿದ್ದು ಪರಿಶೀಲಿಸಿದ್ದಾರೆ.  ಇದನ್ನೂ ಓದಿ: ಕಲಬುರಗಿ | ಹಳೇ ದ್ವೇಷಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಕಲಬುರಗಿ: ಇಬ್ಬರು ಬಾಲಕರ ಸಾವು
ಬಾವಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಕುರಿಗಾಹಿ ಬಾಲಕರು ಸಾವನ್ನಪ್ಪಿದ ದುರಂತ ಘಟನೆ ಜಿಲ್ಲೆಯ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ಗುರುವಾರ ಸಂಜೆ ನಡೆದಿದೆ.

ಸಹೋದರರಾದ ಕುಶಾಲ್ ಚನ್ನಪ್ಪ (8) ಮತ್ತು ರಾಜು ಚನ್ನಪ್ಪ (14) ಮೃತಪಟ್ಟ ಬಾಲಕರು. ಪಟ್ಟಣದ ಮಿನಿ ವಿಧಾನಸೌಧ ಸಮೀಪದ ಬಾವಿಯ ಬಳಿ ಕುರಿ ಮೇಯಿಸುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಬಾಲಕರು ಬಾವಿಗೆ ಬಿದ್ದ ಕೆಲ ಹೊತ್ತಿನ ಬಳಿಕ ಸ್ಥಳೀಯರಿಗೆ ಗೊತ್ತಾಗಿದೆ. ಹಾಗಾಗಿ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವಗಳನ್ನು ಹೊರತೆಗೆದಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article