‘ಕಾಂತಾರ 2’ ಚಿತ್ರಕ್ಕೆ 11 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ರಿಷಬ್ ಶೆಟ್ಟಿ

Public TV
1 Min Read

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ಕಾಂತಾರ 2’ ಸಿನಿಮಾ ಕುರಿತು ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, 50 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆಯಂತೆ. ಕಾಂತಾರ ಬಜೆಟ್ ಗಿಂತಲೂ ಎರಡ್ಮೂರು ಪಟ್ಟು ಕಾಂತಾರ 2 ಬಜೆಟ್ ಇರಲಿದೆಯಂತೆ. ಅದರ ಜೊತೆಗೆ ಮತ್ತೊಂದು ಸುದ್ದಿಯೂ ಹೊರ ಬಿದ್ದಿದೆ.

ಕಾಂತಾರ 2 ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತೊಂದು ಬಗೆಯ ಪಾತ್ರವನ್ನು ನಿರ್ವಹಿಸಬೇಕಾಗಿರುವುದರಿಂದ ಈ ಪಾತ್ರಕ್ಕಾಗಿ ಅವರು 11 ಕೆಜಿ ತೂಕವನ್ನು ಇಳಿಸಿಕೊಳ್ಳಬೇಕಂತೆ. ಆ ಸಿದ್ಧತೆಯಲ್ಲೂ ಅವರು ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ (Shooting), ಮುಹೂರ್ತದ  (Muhurta)ಇತ್ಯಾದಿ ಬಗೆಗಿನ ವಿವರವನ್ನು ಇನ್ನಷ್ಟೇ ಚಿತ್ರತಂಡ ಕೊಡಬೇಕಿದೆ. ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ

ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ (Rishabh Shetty) ಮುಂದಿನ ಸಿನಿಮಾಗಳ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಕಾಂತಾರ 2 (Kantara) ಚಿತ್ರದ ಬಗ್ಗೆ ಮಾತನಾಡಿ, ಸದ್ಯ ಬರವಣಿಗೆಯ ಕೆಲಸ ಮುಗಿದಿದೆ ಎಂದಿದ್ದಾರೆ. ಡೈಲಾಗ್ ಲಾಕ್ ಆಗಿದೆ. ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಬಗ್ಗೆ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.

 

ಸಿನಿಮಾದ ಬರವಣಿಗೆಯ ಕೆಲಸವನ್ನು ಮುಗಿಸಿರುವೆ. ಲೋಕೇಶನ್ ಹುಡುಕಾಟ ನಡೆದಿದೆ. ಕಲಾವಿದರ ಆಯ್ಕೆಯಾಗಬೇಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಮತ್ತಷ್ಟು ಉದ್ದದ ಗಡ್ಡ ಬಿಡಬೇಕು. ಮಳೆಯಲ್ಲೇ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಮುಹೂರ್ತ, ಶೂಟಿಂಗ್ ಮತ್ತಿತರ ಬಗ್ಗೆ ನಿರ್ಮಾಣ ಸಂಸ್ಥೆಯೇ ಮಾಹಿತಿ ನೀಡಲಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್