‘ಕಾಂತಾರ’ಕ್ಕಾಗಿ ಕಳರಿಪಯಟ್ಟು, ಕುದುರೆ ಸವಾರಿ ಕಲಿತಿದ್ದಾರೆ ರಿಷಬ್ ಶೆಟ್ಟಿ

Public TV
1 Min Read

ಕಾಂತಾರ ಸಿನಿಮಾ ಯಶಸ್ಸಿನ ನಂತರ ಕಾಂತಾರ 1 ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty). ಕಾಂತರ ಯಶಸ್ಸನ್ನು ಮೀರಿಸುವಂತಹ ಮತ್ತೊಂದು ಕಾತಾರ ಕೊಡಲು ರಿಷಬ್ ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ಕೇರಳದ ಹೆಸರಾಂತ ಸಮರ ಕಲೆ ಕರಿಪಯಟ್ಟು (Kalaripayattu) ಕಲಿಯುತ್ತಿದ್ದಾರಂತೆ. ಜೊತೆಗೆ ಕುದುರೆ ಸವಾರಿ ಕೂಡ ಶುರು ಮಾಡಿದ್ದಾರೆ. ಚಿತ್ರಕ್ಕಾಗಿ ಹಾಕಲಾದ ಸೆಟ್ ನಲ್ಲೇ ಈ ಕರಸತ್ತು ನಡೆದಿದೆ.

ಕಾಂತಾರ 1  (Kantara 1) ಸಿನಿಮಾ ಟೀಮ್ ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾಗೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಫೇಮಸ್ ಆದ ರುಕ್ಮಿಣಿ ವಸಂತ್ (Rukmini Vasanth) ನಾಯಕಿ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಘೋಷಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ಆಗಬಹುದು ಎನ್ನುವುದು ಆಪ್ತರ ಹೇಳಿಕೆ.

ಈ ನಡುವೆ ಚಿತ್ರೀಕರಣಕ್ಕಾಗಿ ಕುಂದಾಪುರದಲ್ಲಿ (Kundapur) ಬೃಹತ್ ಆಧುನಿಕ ಸೆಟ್ ವೊಂದನ್ನು ನಿರ್ಮಾಣ ಮಾಡಿದೆ ಹೊಂಬಾಳೆ ಫಿಲ್ಮ್ಸ್. ರಾಮೋಜಿರಾವ್ ಫಿಲ್ಮ್ಸ್ ಬಿಟ್ಟರೆ, ಈ ಪ್ರಮಾಣದಲ್ಲಿ ತಯಾರಾದ ಸೆಟ್ ಇದಾಗಲಿದೆ. 200 x 200 ಅಡಿ ಒಳಾಂಗಣ ಹೊಂದಿರುವ ಸೆಟ್ ಇದಾಗಿದೆಯಂತೆ.

ಕಾಡಿನ ಮಧ್ಯ ಕೆಲವು ದೃಶ್ಯಗಳನ್ನು ರಿಷಬ್ ಚಿತ್ರೀಕರಿಸಿದರೆ ಒಳಾಗಂಣದ ಬಹುತೇಕ ಚಿತ್ರೀಕರಣ ಇದೇ ಸೆಟ್ ನಲ್ಲೇ ನಡೆಯಲಿದೆಯಂತೆ. ಕುದುರೆ ಸವಾರಿ ಸೇರಿದಂತೆ ಹಲವಾರು ಕಸರತ್ತುಗಳನ್ನು ಈ ಸೆಟ್ ನಲ್ಲೇ ಮಾಡುವಷ್ಟು ದೊಡ್ಡದಾಗಿ ಅದು ನಿರ್ಮಾಣವಾಗಿದೆ. ಅಲ್ಲಿಯೇ ಡಬ್ಬಿಂಗ್, ಎಡಿಟಂಗ್ ಸ್ಟುಡಿಯೋ ಕೂಡ ನಿರ್ಮಾಣವಾಗಿದೆಯಂತೆ.

ಈಗಾಗಲೇ ಚಿತ್ರೀಕರಣವನ್ನು ಆರಂಭಿಸಿರುವ ರಿಷಬ್, 20 ದಿನಗಳ ಕಾಲ ಮೊದಲನೇ ಹಂತದ ಶೂಟಿಂಗ್ ಇರಲಿದೆಯಂತೆ. ಈಗಾಗಲೇ ಕಾಡಿನ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಸೆಟ್ ನಲ್ಲೂ ಮುಂದಿನ ದಿನಗಳಲ್ಲಿ ಚಿತ್ರೀಕರಣ ಮುಂದುವೆಯಲಿದೆ. ಕುಂದಾಪುರದಲ್ಲೇ ಬಹುತೇಕ ಟೀಮ್ ವಾಸ್ತವ್ಯ ಹೂಡಿದೆ.

 

ಕಥೆಯ ಸಾರಾಂಶವನ್ನು ಹೇಳುವಂತ ದೃಶ್ಯಗಳು ಈಗಾಗಲೇ ಚಿತ್ರೀಕರಣವಾಗಿದ್ದು, ಮುಂದಿನ ದಿನಗಳಲ್ಲಿ ಒಂದೊಂದೇ ಪ್ರಮುಖ ಪಾತ್ರಗಳು ಜೊತೆಯಾಗುತ್ತವೆಯಂತೆ. ಅಂದಹಾಗೆ ಸೆಟ್ ಫೋಟೋಗಳು ಸೋರಿಕೆಯಾಗದಂತೆ ಮುತುವರ್ಜಿ ವಹಿಸಿದ್ದಾರೆ ರಿಷಬ್ ಅಂಡ್ ಟೀಮ್.

Share This Article