ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

Public TV
1 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೆಲಸದ ನಿಮಿತ್ತ ಊರಲ್ಲೇ ಇರುವ ರಿಷಬ್ ಕಳೆದ ದಿನ ರಾತ್ರಿಯೇ ಕಾಂತಾರ ಸಿನಿಮಾ (Kantara Cinema) ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿಮಾ ಸೆಟ್‌ನಲ್ಲೇ ಕೇಕ್ ಕತ್ತರಿಸಿ ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ್ರು. ಈ ವೇಳೆ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಪತಿಗೆ ಸಾಥ್ ಕೊಟ್ರು.

ಕಾಂತಾರ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿರುವ ಕಾರಣ ಊರಲ್ಲೇ ಇರುವ ರಿಷಬ್ ಅಲ್ಲಿಯೇ ಸರಳವಾಗಿ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದಾರೆ. ಮುಖ್ಯವಾಗಿ ತಾವು ದತ್ತು ಪಡೆದಿರುವ ಕೆರಾಡಿ ಸರ್ಕಾರಿ ಶಾಲೆಯ (Keradi School) ಮಕ್ಕಳು ರಿಷಬ್ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿಬ್ಯೂಟಿ

ಇಡೀ ದಿನವನ್ನ ಕುಟುಂಬದ ಜೊತೆ ರಿಷಬ್ ಕಳೆದಿದ್ದಾರೆ . ಕಾಂತಾರ ಕೊನೆಯ ಘಟ್ಟ ತಲುಪಿದ್ದು ಕುಂದಾಪುರದ ಕೆರಾಡಿ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಬ್ಯುಸಿ ಇರುವ ರಿಷಬ್ ಹುಟುಹಬ್ಬ ಆಚರಣೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿಲ್ಲ.

ರಿಷಬ್ ನಟಿಸಿ ನಿರ್ದೇಶಿಸುತ್ತಿರುವ `ಕಾಂತಾರ-1′ ಇದೇ ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ. ಬಹುನಿರೀಕ್ಷಿತ ಈ ಚಿತ್ರವನ್ನ ಹೊಂಬಾಳೆ ಫಿಲಂಸ್ (Hombale Films) ನಿರ್ಮಿಸಿದ್ದು ಹುಟ್ಟುಹಬ್ಬದ ವಿಶೇಷವಾಗಿ ರಿಷಭ್‌ ಶೆಟ್ಟಿಯ ಪೋಸ್ಟರ್ ಕೂಡ ಆಫಿಷಿಯಲ್ ರಿಲೀಸ್ ಆಗಿತ್ತು. ಇದೀಗ ಕೆಲಸದ ಕಡೆ ಹೆಚ್ಚಿನ ಗಮನಹರಿಸುತ್ತಿರುವ ರಿಷಬ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Share This Article