ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್

Public TV
2 Min Read

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಹಿಂದುಗಡೆ ಮಾತನಾಡಿ ಅಭಿಮಾನಿಗಳನ್ನು ರಂಜಿಸಿದ್ದ 21 ವರ್ಷದ ಕೀಪರ್ ರಿಷಬ್ ಪಂತ್ ಈಗ ತನ್ನ ಗೆಳತಿಯನ್ನು ಮೊದಲ ಬಾರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

ರಿಷಬ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಗೆಳತಿ ಇಶಾ ನೇಗಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ “ನಾನು ನಿನ್ನನ್ನು ಸಂತೋಷ ಪಡಿಸುತ್ತೇನೆ. ಯಾಕೆಂದರೆ ನನ್ನ ಸಂತೋಷಕ್ಕೆ ನೀನು ಕಾರಣ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ: ಏಕದಿನ ಸರಣಿಯಿಂದ ರಿಷಬ್ ಪಂತ್ ಡ್ರಾಪ್ – ಕಾರಣ ಬಿಚ್ಚಿಟ್ಟ ರವಿಶಾಸ್ತ್ರಿ

ರಿಷಬ್ ಪಂತ್ ಹಾಕಿದ ಫೋಟೋವನ್ನೇ ತನ್ನ ಖಾತೆಯಿಂದ ಪೋಸ್ಟ್ ಮಾಡಿರುವ ಇಶಾ ನೇಗಿ, ನನ್ನ ಮನುಷ್ಯ, ನನ್ನ ಆತ್ಮೀಯ, ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಜೀವನದ ಪ್ರೀತಿ ಎಂದು ಬರೆದುಕೊಂಡಿದ್ದಾರೆ.

https://www.instagram.com/p/Bss2wWUBxpq/?utm_source=ig_embed

ಯಾರು ಇಶಾ ನೇಗಿ?
ಇಶಾ ದೆಹಲಿಯ ಪ್ರಸಿದ್ದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪದವಿ ಓದಿದ್ದು, ಈಗ ಡೆಹ್ರಾಡೂನ್ ನಲ್ಲಿರುವ ಸಿಜೆಎಂ ಕಾಲೇಜಿನಲ್ಲಿ ಸಾಹಿತ್ಯದ ಬಗ್ಗೆ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಇದನ್ನು ಓದಿ: ಸಿಕ್ಸರ್, ಕ್ಯಾಚ್ ಆಯ್ತು ಈಗ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ!

ಇಲ್ಲಿಯವರೆಗೆ ರಿಷಬ್ ಪಂತ್ ಮತ್ತು ಇಶಾ ಇಬ್ಬರು ಪ್ರೇಮಿಗಳು ಎನ್ನುವುದು ಯಾರಿಗೆ ತಿಳಿದಿರಲಿಲ್ಲ. ಆದರೆ ಬುಧವಾರ ರಿಷಬ್ ಪಂತ್ ಫೋಟೋವನ್ನು ಶೇರ್ ಮಾಡಿದ ಬಳಿಕ ಇಶಾ ಈಗ ಕಾಲೇಜಿನನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಇಶಾ ನೋಡಲೆಂದೇ ಉಳಿದ ವಿದ್ಯಾರ್ಥಿಗಳು ತರಗತಿಯತ್ತ ಬರುತ್ತಿದ್ದಾರೆ. ತಮ್ಮ ಖಾತೆಯಲ್ಲಿ ನಾನು ಉದ್ಯಮಿಯಾಗಿದ್ದು, ಒಳಾಂಗಣ ವಿನ್ಯಾಸಕಿ ಎಂದು ಇಶಾ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ 58.33 ಸರಾಸರಿಯಲ್ಲಿ ಒಟ್ಟು 350 ರನ್ ಗಳಿಸಿದ್ದು, ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ರಿಷಬ್ ಪಂತ್ ಆಸೀಸ್ ವಿರುದ್ಧದ ನಾಲ್ಕನೇಯ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾ ಪರ ದಾಖಲೆ ನಿರ್ಮಿಸಿದ್ದರು. ರಿಷಬ್ ಪಂತ್ ಅಜೇಯ 159 ರನ್(189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ತನ್ನ 9ನೇ ಪಂದ್ಯದಲ್ಲಿ ರಿಷಬ್ ಪಂತ್ 85 ಎಸೆತದಲ್ಲಿ 50 ರನ್(4 ಬೌಂಡರಿ), 137 ಎಸೆತದಲ್ಲಿ 100 ರನ್(8 ಬೌಂಡರಿ), 185 ಎಸೆತದಲ್ಲಿ 150 ರನ್(14 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *