Kantara: ಯೂಟ್ಯೂಬ್‌ನಲ್ಲಿ ಮತ್ತೆ ʼಸಿಂಗಾರ ಸಿರಿಯೇ’ ಸದ್ದು

Public TV
2 Min Read

ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ ಅಂದರೆ ರಿಷಬ್ ಶೆಟ್ಟಿ (Rishab Shetty) ನಟನೆಯ Kantara ಸಿನಿಮಾ. ಕಳೆದ ವರ್ಷ ರಿಲೀಸ್ ಆದ ದಿನದಿಂದ ಒಂದಲ್ಲಾ ಒಂದು ರೀತಿಯಲ್ಲಿ ಸಿನಿಮಾ ದಾಖಲೆ ಮಾಡುತ್ತಲೇ  ಬಂದಿದೆ. ಇದೀಗ ಮತ್ತೆ ಸಿನಿಮಾ ಹೊಸ ವಿಚಾರವಾಗಿ ಸದ್ದು ಮಾಡ್ತಿದೆ. ಈ ಚಿತ್ರದ ಸೂಪರ್ ಹಿಟ್ `ಸಿಂಗಾರ ಸಿರಿಯೇ’ ಮತ್ತೆ ಹವಾ ಕ್ರಿಯೆಟ್‌ ಮಾಡಿದೆ. ಇದನ್ನೂ ಓದಿ: ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ

ಹೊಂಬಾಳೆ ಫಿಲ್ಮ್ (Homabale Films) ನಿರ್ಮಾಣದ ಕಾಂತಾರ ಸಿನಿಮಾ ರಿಷಬ್- ಸಪ್ತಮಿ ಜೋಡಿ, ತುಳುನಾಡಿನ ಸೊಗಡಿನ ಕಥೆ, ಸಾಂಗ್ಸ್ ಎಲ್ಲವೂ ಸೂಪರ್. ಅದರಲ್ಲೂ ಸಿಂಗಾರ ಸಿರಿಯೇ ಹಾಡು ಮೋಡಿ ಮಾಡಿದ ಪರಿ ಅಷ್ಟೀಷ್ಟಲ್ಲ. ಇದೀಗ ಈ ಹಾಡು 100 ಮಿಲಿಯನ್ (10 ಕೋಟಿ) ವಿವ್ಸ್ ದಾಟಿದೆ. ಈ ಕುರಿತು ‘ಕಾಂತಾರ’ ನಟಿ ಲೀಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಸಿಂಗಾರ ಸಿರಿಯೇ… ಹಾಗೂ ವರಾಹ ರೂಪಂ.. ಎರಡೂ ಹಾಡುಗಳು 100 ಮಿಲಿಯನ್ ಗಡಿ ದಾಟಿದೆ. ನಿಜಕ್ಕೂ ಇದನ್ನೂ ಕನಸಿನಲ್ಲೂ ಊಹಿಸಿರಲಿಲ್ಲ. ಈ ಹಾಡುಗಳ ಬಗ್ಗೆ ನೀವು ತೋರಿದ ಪ್ರೀತಿಗೆ ಬಹಳ ಧನ್ಯವಾದಗಳು ಎಂದು ನಟಿ ಸಪ್ತಮಿ ಗೌಡ ಬರೆದುಕೊಂಡಿದ್ದಾರೆ. ತಮ್ಮ ಟ್ವೀಟನ್ನು ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಸ್ಮ್ ಹಾಗೂ ವಿಜಯ್ ಕಿರಗಂದೂರು ಅವರಿಗೆ ಟ್ಯಾಗ್ ಮಾಡಿದ್ದಾರೆ.

Kantara ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಬರೆದ ಹಾಡಿನ ಸಾಲುಗಳಿಗೆ ಅನನ್ಯಾ ಭಟ್ ಹಾಗೂ ವಿಜಯ್ ಪ್ರಕಾಶ್ ದನಿಯಲ್ಲಿ ಸಿಂಗಾರ ಸಿರಿಯೇ ಹಾಡು ಮೂಡಿ ಬಂದಿತ್ತು. ಸಾಯಿ ವಿಘ್ನೇಶ್ `ವರಾಹ ರೂಪಂ’ ಹಾಡನ್ನು ಹಾಡಿದ್ದಾರೆ. ಇನ್ನೂ ಕಾಂತಾರ 2 ಸಿನಿಮಾ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article