ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

Public TV
1 Min Read

ಹುನಿರೀಕ್ಷಿತ ಕಾಂತಾರ ಚಾಪ್ಟರ್-1 (Kantara Chapter-1) ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿ ನಿಂತಿದೆ. ಈ ಚಿತ್ರದ ಮೇಲೆ ವಿಶ್ವದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಬಗ್ಗೆ ಹೊಂಬಾಳೆ ಸಂಸ್ಥೆ ಸಿಹಿಸುದ್ದಿ ನೀಡಿದೆ. ಇದೇ ಸೆ.26 ರ ಮಧ್ಯಾಹ್ನ 12:29 ರಿಂದ ಕರ್ನಾಟಕದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ (Advance Booking) ಓಪನ್ ಆಗಲಿದೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ಟ್ರೈಲರ್‌ ರಿಲೀಸ್ ಮಾಡಿದೆ. ಸಿನಿಮಾದ ಟ್ರೈಲರ್‌ ನೋಡಿ ಈಗಾಗ್ಲೇ ಭಕ್ತಗಣ ಸಂಭ್ರಮಿಸಿದೆ. ಕಾಂತಾರ ದೃಶ್ಯಕಾವ್ಯದ ವೈಭವ ನೋಡಿ ಕುಣಿದು ಕುಪ್ಪಳಿಸೋಕೆ ಕಾದು ಕುಳಿತಿದೆ ಅಭಿಮಾನಿ ಬಳಗ. ಇನ್ನೊಂದು ವಾರವಷ್ಟೇ ಬಾಕಿ ಇರುವ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ ನೀಡಿರುವ ಖುಷಿ ಸಮಾಚಾರಕ್ಕೆ ಅಭಿಮಾನಿಗಳು ಅಡ್ವಾನ್ಸ್ ಆಗಿ ಬುಕಿಂಗ್ ಮಾಡೋಕೆ ಸಿದ್ಧರಾಗಿದ್ದಾರೆ.

ಕಾಂತಾರ ಸಿನಿಮಾ ದಾಖಲೆಯನ್ನ ಮಾಡಿತ್ತು. ಇದೀಗ ಪ್ರೀಕ್ವೆಲ್ ತೆರೆಗೆ ಬರುತ್ತಿದ್ದು, ಸಿನಿಮಾ ತೆರೆಗೆ ಬರುವ ಮುಂಚೆಯೇ ಕೋಟಿ ಕೋಟಿ ಕಲೆಹಾಕಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್‌ನಲ್ಲೂ ದಾಖಲೆಯನ್ನ ಸೃಷ್ಟಿಸುವ ನಿರೀಕ್ಷೆಗಳಿವೆ. `ಕಾಂತಾರ’ ಜಗತ್ತನ್ನ ಕಣ್ತುಂಬಿಕೊಳ್ಳಲು ಕ್ಯೂರಿಯಾಸಿಟಿಯಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಟೈಂ ಫಿಕ್ಸ್ ಮಾಡಲಾಗಿದೆ.

ಸದ್ಯ ಕರ್ನಾಟಕದ ಅಡ್ವಾನ್ಸ್ ಬುಕ್ಕಿಂಗ್‌ಗೆ ದಿನ ಮತ್ತು ಟೈಂ ನಿಗದಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಒಂದೊಂದೆ ರಾಜ್ಯದ ಅಪ್‌ಡೇಟ್‌ಗಳು ಸಿಗಲಿದೆ.

Share This Article