ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

Public TV
1 Min Read

`ಕಾಂತಾರ’ (Kantara) ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಇದೀಗ ಪತ್ನಿ (Wife) ಪ್ರಗತಿ (Pragathi Shetty) ಹುಟ್ಟುಹಬ್ಬದಕ್ಕೆ ಶುಭಹಾರೈಸಿದ್ದಾರೆ. ಸ್ಪೆಷಲ್ ಫೋಟೋ ಹಂಚಿಕೊಂಡು ಪತ್ನಿಗೆ ರೊಮ್ಯಾಂಟಿಕ್ ಆಗಿ ರಿಷಬ್ ವಿಶ್ ಮಾಡಿದ್ದಾರೆ.

`ರಿಕ್ಕಿ’, `ಕಿರಿಕ್ ಪಾರ್ಟಿ’ ಚಿತ್ರದಲ್ಲಿ ನಟನೆಯ ಜೊತೆ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟ ರಿಷಬ್ ಶೆಟ್ಟಿ `ಕಾಂತಾರ’ ಚಿತ್ರದ ಮೂಲಕ ಸಕ್ಸಸ್‌ಫುಲ್ ನಟ ಕಮ್ ನಿರ್ದೇಶಕನಾಗಿ ಹೊರಹೊಮ್ಮಿದ್ದರು. ತನ್ನ ಕೆಲಸ ಮತ್ತು ಸಕ್ಸಸ್‌ಗೆ ಆಧಾರ ಸ್ತಂಭವಾಗಿರುವ ಪತ್ನಿ ಪ್ರಗತಿ ಶೆಟ್ಟಿ ಬರ್ತ್‌ಡೇಗೆ ಸ್ಪೆಷಲ್ ಆಗಿ ನಟ ವಿಶ್ ಮಾಡಿದ್ದಾರೆ.

ಕಾಂತಾರ 2 RISHAB SHETTY

ಕಷ್ಟದ ದಿನಗಳಲ್ಲಿ ಸಾಥ್ ನೀಡಿ, ಪ್ರೀತಿಸಿ ಮದುವೆಯಾದ ಮಲೆನಾಡಿನ ಹುಡುಗಿ ಪ್ರಗತಿ ಶೆಟ್ಟಿ ಅವರು ರಿಷಬ್ ಶೆಟ್ಟಿಗೆ ಪಾಲಿನ ಸಕ್ಸಸ್ ಹಿಂದಿನ ಶಕ್ತಿ ಎಂದರೆ ತಪ್ಪಾಗಲಾರದು. ರಿಷಬ್ ಅವರ ಟ್ಯಾಲೆಂಟ್ ಮತ್ತು ಶ್ರಮದ ಜೊತೆ ಪ್ರಗತಿ ಶೆಟ್ಟಿ ಸಹಕಾರ ಕೂಡ ಸಾಕಷ್ಟಿದೆ.

ನನ್ನ ಸ್ವೀಟ್ ಹಾರ್ಟ್‌ಗೆ ಜನ್ಮದಿನದ ಶುಭಾಶಯಗಳು. ನಿನ್ನ ನಿರಂತರ ಬೆಂಬಲಕ್ಕಾಗಿ ಮತ್ತು ನನಗೆ ಮತ್ತು ನನ್ನ ಕೆಲಸಕ್ಕೆ ಶಕ್ತಿಯ ಸ್ತಂಭವಾಗಿದ್ದಕ್ಕಾಗಿ ನಿನಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ರಿಷಬ್ ಶೆಟ್ಟಿ ತಮ್ಮ ಪತ್ನಿಗೆ ಶುಭಹಾರೈಸಿದ್ದಾರೆ. `ಕಾಂತಾರ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಪತ್ನಿಗೆ ಶೇಕ್ ಹ್ಯಾಡ್ ಮಾಡ್ತಿರುವ ಚೆಂದದ ಫೋಟೋವನ್ನ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ನಿಧಿ ಸುಬ್ಬಯ್ಯ ಹಾಟ್‌ ಫೋಟೋಶೂಟ್

`ಕಾಂತಾರ’ ಸಿನಿಮಾ ಸಕ್ಸಸ್ ನಂತರ ಕಾಂತಾರ ಪಾರ್ಟ್ 2ಗಾಗಿ ರಿಷಬ್ ತಯಾರಿ ಮಾಡ್ತಿದ್ದಾರೆ. ಸಿನಿಮಾಗಾಗಿ ಸಕಲ ತಯಾರಿ ಮಾಡ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *