ಕಾಂತಾರ ಚಾಪ್ಟರ್-1 ಸಿನಿಮಾದ ಸಕ್ಸಸ್ ಜರ್ನಿ ಹೇಗಿದೆ ಅನ್ನೋದು ತೆರೆಮೇಲೆ ಕಾಣುವ ದೃಶ್ಯವೈಭವ. ಸಾಹಸ ಸನ್ನಿವೇಶಗಳ ಝಲಕ್, ಕಾಂತಾರದ ವಾವ್ ಎನ್ನಿಸುವ ಕ್ಲೈಮ್ಯಾಕ್ಸ್ (Kantara Climax) ಇವೆಲ್ಲವನ್ನ ಕೆಲನಿಮಿಷ ನೋಡಿ ಅಬ್ಬಬ್ಬಾ ಅಂತಾ ಹೇಳ್ತೀವಿ. ಆದ್ರೆ ಈ ದೃಶ್ಯಗಳನ್ನ ಶೂಟಿಂಗ್ ಮಾಡುವ ವೇಳೆ ತೆರೆಹಿಂದೆ ಕಲಾವಿದರು, ತಂತ್ರಜ್ಞರು ಪಡುವ ಕಷ್ಟ ಹೇಗಿರುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿರೋಲ್ಲ. ಇವತ್ತು ಕಾಂತಾರ ಸಿನಿಮಾವನ್ನ ಮೆಚ್ಚಿ ಹಾಡಿ ಹೊಗಳುತ್ತಿರೋದಕ್ಕೆ ತೆರೆ ಮರೆಯಲ್ಲಿ ಆದ ಆ ದಿನದ ಹೋರಾಟ ಹೇಗಿತ್ತು ಅಂತಾ ರಿಷಬ್ ಶೆಟ್ಟಿ (Rishab Shetty) ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
Climax shooting ನ ಸಮಯ … ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ..
ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು..
This was during the climax shoot , a swollen leg, an… pic.twitter.com/JJadywiaXN
— Rishab Shetty (@shetty_rishab) October 13, 2025
ಕಾಂತಾರ ಚಾಪ್ಟರ್-1 ಕ್ಲೈಮ್ಯಾಕ್ಸ್ ಶೂಟಿಂಗ್ (Kantara Chapter 1 Climax Shooting) ವೇಳೆ ತೆರೆಹಿಂದಿನ ರಿಷಬ್ ಹೋರಾಟ ಹೇಗಿತ್ತು ಅನ್ನೋದನ್ನ ಈ ಫೋಟೋಗಳು ಅನಾವರಣಗೊಳಿಸಿವೆ. ಯೆಸ್. ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ, ಸುಸ್ತಾಗಿ ಮಲಗಿದ್ದ ರಿಷಬ್ ಶೆಟ್ಟಿ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ ಅಂದ್ರೆ ಅದಕ್ಕೆ ತೆರೆಹಿಂದೆ ನಾವು ಪಟ್ಟ ಶ್ರಮದ ಜೊತೆಗೆ ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ಜಾಲತಾಣದಲ್ಲಿ ಡಿವೈನ್ಸ್ಟಾರ್ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ಟೈಮಲ್ಲಿ ತಮ್ಮ ಕಾಲಿಗೆ ಆದ ನೋವುಗಳನ್ನ ಕೆಲ ಫೋಟೋಗಳ ಸಮೇತ ಹಂಚಿಕೊಂಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಈ ಮೂಲಕ ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಜಾಲತಾಣದಲ್ಲಿ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ ನಟ. ಒಟ್ಟಿನಲ್ಲಿ ತೆರೆಯ ಹಿಂದಿನ ಪರಿಶ್ರಮಗಳೆಲ್ಲವು ಇಂದು ತೆರೆಯ ಮೇಲೆ ಸಕ್ಸಸ್ ಆಗಿ ಕಾಣ್ತಿರೋದಂತೂ ನಿಜ.