ಹಿಂದಿ ಬಿಗ್ ಶೋನಲ್ಲಿ ರಿಷಬ್ ಶೆಟ್ಟಿ – ಬಿಗ್‌ಬಿಗೆ ವಿಶ್ ಮಾಡಿದ ಡಿವೈನ್ ಸ್ಟಾರ್

Public TV
1 Min Read

ಹಿಂದಿಯ ಬಿಗ್‌ಶೋ ಕೌನ್ ಬನೆಗಾ ಕರೋಡ್‌ಪತಿ (Kaun Banega Crorepati) ಶೋನಲ್ಲಿ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಭಾಗವಹಿಸಿದ್ದಾರೆ. ಬಿಗ್‌ಬಿ ಅಮಿತಾಬ್ (Amitabh Bachchan) ಜೊತೆ ಎರಡು ದಿನದ ಹಿಂದೆ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದಾರಂತೆ. ಇಂದು (ಅ.11) ರಂದು ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬ ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೋ ಜೊತೆಗೆ ವಿಶ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಜೊತೆಗೆ ಮುಂಬರುವ ಎಪಿಸೋಡ್‌ಗಾಗಿ ಕಾಯ್ತಿರುತ್ತೇನೆ ಅಂತಾ ಬರೆದುಕೊಂಡಿದ್ದಾರೆ.

ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದಾದ್ಯಂತ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ತೆರೆಕಂಡ ಕಡೆಗೆಲ್ಲ ಪ್ರೇಕ್ಷಕರ ಮನಸೂರೆ ಮಾಡಿದೆ. ಬಾಕ್ಸಾಫೀಸ್‌ನಲ್ಲಿ 500 ಕೋಟಿ ಕ್ಲಬ್ ಸೇರಿರುವ ಕಾಂತಾರ ಚಾಪ್ಟರ್-1 ಚಿತ್ರ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಕಾಂತಾರ ಚಾಪ್ಟರ್-1 ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಸಿನಿಮಾ ತಂಡ ದೇವರ ಸನ್ನಿಧಾನದಲ್ಲಿ ಪೂಜಾ ಕಾರ್ಯಗಳನ್ನ ನಿರ್ವಹಿಸುತ್ತಿದೆ. ಜೊತೆಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮುಂಬೈನಲ್ಲಿ `ಕೌನ್ ಬನೆಗಾ ಕರೋಡ್‌ಪತಿ’ ಶೋನಲ್ಲಿ ಭಾಗಿಯಾಗಿದ್ದಾರೆ. `ಕೌನ್ ಬನೆಗಾ ಕರೋಡ್‌ಪತಿ’ ಶೋನಲ್ಲಿ ರಿಷಬ್ ಭಾಗಿಯಾದ ಎಪಿಸೋಡ್ ಸದ್ಯದಲ್ಲಿಯೇ ಪ್ರಸಾರವಾಗಲಿದೆ.

Share This Article