ಹುಟ್ಟುಹಬ್ಬದ ದಿನಕ್ಕೆ ರಿಷಬ್ ಶೆಟ್ಟಿ ಕಂಪ್ಲೀಟ್ ಫ್ಯಾಮಿಲಿಮ್ಯಾನ್

Public TV
1 Min Read

ಬಾರಿಯ ಹುಟ್ಟುಹಬ್ಬದ ದಿನದ ಸಂಭ್ರಮವನ್ನ ರಿಷಬ್ ಶೆಟ್ಟಿ (Rishab Shetty) ಸಂಪೂರ್ಣವಾಗಿ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಆನಂದದ ಕ್ಷಣಗಳ ದೃಶ್ಯವನ್ನ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಖಾಸಗಿ ರೆಸಾರ್ಟ್‌ನಲ್ಲಿ ರಿಷಬ್ ಮಕ್ಕಳು ಹಾಗೂ ಪತ್ನಿ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಆಟವಾಡುತ್ತಾ ಸಮಯ ಕಳೆದಿದ್ದಾರೆ.

`ಕಾಂತಾರ 1’ರ (Kantara Chapter 1) ಚಿತ್ರೀಕರಣದಲ್ಲಿ ಭಾಗಿಯಾಗಿರುವ ರಿಷಬ್ ಕಂಟಿನ್ಯೂ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಕುಟುಂಬದ ಜೊತೆ ಸಮಯ ಕಳೆಯಲು ಆಗಿರಲಿಲ್ಲ. ಆದರೆ ಈ ಹುಟ್ಟುಹಬ್ಬವನ್ನ ಕುಟುಂಬಕ್ಕಾಗಿ ಮೀಸಲಿಟ್ಟಿದ್ದರು ರಿಷಬ್. ಹೀಗಾಗಿ, ಯಾರಿಗೂ ಸಿಗದೆ ಖಾಸಗಿ ರೆಸಾರ್ಟ್‌ನಲ್ಲಿ ಸಮಯ ಕಳೆದಿದ್ದಾರೆ. ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

`ಕಾಂತಾರ 1’ರ ಚಿತ್ರೀಕರಣ ಕುಂದಾಪುರದಲ್ಲೇ ನಡೆಯುತ್ತಿದ್ದು, ಹುಟ್ಟುಹಬ್ಬದ ಹಿಂದಿನ ದಿನರಾತ್ರಿ ಸೆಟ್ಟಲ್ಲೇ ಕೇಕ್ ಕತ್ತರಿಸಿ ತಂಡದ ಜೊತೆ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ರು. ಬಳಿಕ ಒಂದು ದಿನ ಬ್ರೇಕ್ ತೆಗೆದುಕೊಂಡು ಮತ್ತೆ ಸಿನಿಮಾ ಕೆಲಸ ಪ್ರಾರಂಭಿಸಿದ್ದಾರೆ.

Share This Article